ಬೆಂಗಳೂರು:- ಮದುವೆಯಾಗಿ ಮೂರೇ ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾವ್ಯಾಪ್ತಿಯ ವಿದ್ಯಾಮಾನ ನಗರದಲ್ಲಿ ಜರುಗಿದೆ.
Advertisement
ಅಮೂಲ್ಯ(23)ನೇಣಿಗೆ ಶರಣಾದ ನವವಿವಾಹಿತೆ. ಅಂದ್ರಹಳ್ಳಿಯ ನಿವಾಸಿ ಆಗಿದ್ದ ಅಮೂಲ್ಯ ಹಾಗೂ ವಿದ್ಯಾಮಾನ್ ನಗರದಲ್ಲಿ ವಾಸವಿದ್ದ ಅಭಿಷೇಕ್ ನಡುವೆ ಪ್ರೀತಿ ಮೂಡಿತ್ತು. ಮೂರು ತಿಂಗಳ ಹಿಂದೆ ಮನೆಯವರನ್ನ ಒಪ್ಪಿಸಿ ಇಬ್ಬರು ಮದುವೆ ಆಗಿದ್ರು. ಆದ್ರೆ ಇಂದು ಏಕಾಏಕಿ ಗಂಡನ ಮನೆಯಲ್ಲಿ ಅಮೂಲ್ಯ ನೇಣಿಗೆ ಶರಣಾಗಿದ್ದಾರೆ.
ಹೀಗಾಗಿ ಅಮೂಲ್ಯ ಸಾವಿಗೆ ಅಭಿಷೇಕ್ ಕುಟುಂಬಸ್ಥರೇ ಕಾರಣ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.


