ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಕೆಪಿಟಿಸಿಎಲ್ ವತಿಯಿಂದ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ಬೆಂಗಳೂರಿನ ಹಲವೆಡೆ ಪವರ್ ಕಟ್ ಇರಲಿದೆ.
66/11 ರೆಮೋ ವಿದ್ಯುತ್ ಕೇಂದ್ರದ ಬಾಪೂಜಿ ನಗರ, ಕವಿತಾ ಲೇಔಟ್, ರಂಗನಾಥ ಕಾಲೋನಿ, ಬ್ಯಾಟರಾಯನಪುರ ಐಯ್ಯಣ್ಣಶೆಟ್ಟಿ ಲೇಔಟ್, ಗಣಪತಿನಗರ, ಪ್ರೈಡ್ ಅಪಾರ್ಟ್‌ಮೆಂಟ್, ದೀಪಾಂಜಲಿ ನಗರ, ಪಟೇಲ್ ಪುಟ್ಟಯ್ಯ ಇಂಡಸ್ಟ್ರೀಯಲ್ ಏರಿಯಾ, ಬಿ.ಹೆಚ್.ಇ.ಎಲ್, ಮುತ್ತಾಚಾರಿ ಇಂಡಸ್ಟ್ರಿಯಲ್ ಏರಿಯಾ, ಜ್ಯೋತಿ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ತಿಳಿಸಿದೆ.
ಗಂಗೊಂಡನಹಳ್ಳಿ, ವಿನಾಯಕ ಲೇಔಟ್, ಮೆಟ್ರೋ ಲೇಔಟ್, ನಾಯಂಡಹಳ್ಳಿ, ಬ್ಯಾಟರಾಯನಪುರ, ಮೈಸೂರು ರಸ್ತೆ, ಶೋಭಾ ಟೆಂಟ್ ರೋಡ್, ಗುಡ್ಡದಹಳ್ಳಿ ಎಕ್ಸ್ಟೆನ್ಶನ್, ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್, ಆರ್‌ಆರ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲದೆ ಎಂದು ತಿಳಿಸಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದೆ.



