ಬೆಂಗಳೂರು: ಶೇಷಾದ್ರಿಪುರಂ ಮುಖ್ಯ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಭಾನುವಾರ ಮಧ್ಯರಾತ್ರಿ ಕಳ್ಳತನ ಯತ್ನ ವಿಫಲವಾಗಿದೆ.
ಕಳ್ಳರು ಬ್ಯಾಂಕಿನ ಎಡಭಾಗದ ಕಿಟಕಿ ಗ್ರಿಲ್ ಮುರಿದು ಒಳಗೆ ನುಗ್ಗಿದ್ದರು. ಅವರು ಸಿಸಿಟಿವಿ ವೈರ್‌ಗಳನ್ನು ಕತ್ತರಿಸಲು ಪ್ರಯತ್ನಿಸಿದಾಗ ಅಲಾರಂ ಮೊಳಗಿದ್ದು, ಕಳ್ಳರು ಭಯಗೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯ ಸಮಯದಲ್ಲಿ ಬ್ಯಾಂಕಿನ ಭದ್ರತಾ ಸಿಬ್ಬಂದಿ ಅಲಾರಂ ಶಬ್ದವನ್ನು ಪರಿಶೀಲಿಸಿದ್ದರೂ, ಕಿಟಕಿಯ ಬಳಿ ಹೋಗಿ ನೋಡದೇ ನಿರ್ಲಕ್ಷಿಸಿದರು. ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಬಂದಾಗ ಕಳ್ಳತನ ಯತ್ನದ ಬಗ್ಗೆ ತಿಳಿದುಬಂದಿತು.
ಶೇಷಾದ್ರಿಪುರಂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.



