ಬೆಂಗಳೂರು:- ನಗರದಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ರ್ಯಾಪಿಡೋ ಬೈಕ್ ನಲ್ಲಿದ್ದ ಮೂವರು ಯುವಕರು ಗಂಭೀರ ಗಾಯಗೊಂಡಿರುವ ಘಟನೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಜರುಗಿದೆ.
Advertisement
ರ್ಯಾಪಿಡೋ ಸವಾರನು, ರೈಲ್ವೆ ನಿಲ್ದಾಣದಿಂದ ಇಬ್ಬರು ಯುವಕರನ್ನ ಪಿಕ್ ಅಪ್ ಮಾಡಿದ್ದರು. ಸ್ವಲ್ಪ ಮುಂದೆ ಬರ್ತಿದ್ದಂತೆ ಮೊದಲು ಟ್ಯಾಂಕರ್ ಗೆ ಡಿಕ್ಕಿ ಹೊಡೆದು, ಬಳಿಕ ಆಟೋಗೂ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಮೂವರು ಬೈಕ್ ಸವಾರರು, ಕೆಳಗೆ ಬಿದ್ದಿದ್ದಾರೆ. ಹೆಲ್ಮೆಟ್ ಇಲ್ಲದೆ ಕಾರಣ ಮೂವರ ತಲೆಗೂ ಪೆಟ್ಟಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಮೂವರು ಯುವಕರು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಬಂಧ ಚಾಮರಾಜಪೇಟೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.