ಸಚಿವ ಹೆಚ್.ಕೆ. ಪಾಟೀಲರ 72ನೇ ಜನ್ಮದಿನದ ನಿಮಿತ್ತ ಬೇನುಭಾಟ ಕಪ್-2025 ಹಾಕಿ ಪಂದ್ಯಾವಳಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗಾಂಧಿನಗರದಲ್ಲಿನ ಹಾಕಿ ಮೈದಾನದಲ್ಲಿ ಗದಗ ಜಿಲ್ಲಾ ಹಾಕಿ ಆಡಳಿತ ಮಂಡಳಿಯ ವತಿಯಿಂದ ಸಚಿವ ಹೆಚ್.ಕೆ. ಪಾಟೀಲರ 72ನೇ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದ ಬೇನುಭಾಟ ಕಪ್-2025 ರಾಜ್ಯಮಟ್ಟದ ಆಹ್ವಾನಿತ ಹಾಕಿ ಪಂದ್ಯಾವಳಿಯನ್ನು ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಹೆಚ್. ಪಾಟೀಲ ಉದ್ಘಾಟಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಾಲ ನಡೆಯುವ ಈ ಕ್ರೀಡೆಯಲ್ಲಿ ಶಿಸ್ತು, ಶಾಂತಿ, ಸಂಯಮದಿAದ ಹಾಕಿ ಪಂದ್ಯಾವಳಿಗಳನ್ನು ವೀಕ್ಷಿಸಿ ಆನಂದಿಸಬೇಕು. ಸಚಿವರಾದ ಹೆಚ್.ಕೆ. ಪಾಟೀಲರ ಜನ್ಮದಿನದ ನಿಮಿತ್ತ ಬೇನುಭಾಟ್ ಕಪ್-2025 ಪಂದ್ಯಾವಳಿಯನ್ನು ಮಂಜುನಾಥ ಬಾಗಲಕೋಟಿಯವರ ನೇತೃತ್ವದಲ್ಲಿ ಆಯೋಜನೆ ಮಾಡಿರುವುದು ಸಂತಸ ತಂದಿದೆ ಎಂದರು.

ಈ ಸಂದರ್ಭದಲ್ಲಿ ಗದಗ ಜಿ.ಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಮಂಜುನಾಥ ಬಾಗಲಕೋಟಿ, ಮಹೇಶ ಕೆ, ಡಾ. ಪ್ರವೀಣ ಚಪ್ಪರಮನಿ, ದೀಪಕ ಗಾಗಡೆ, ಶಿವರಾಜ ಕೊರಸ, ಚಂದ್ರು ಕಟ್ಟಿಮನಿ, ಹನುಮಂತ ಬ್ಲೆಸಿಂಗ್ಸ್ ಸ್ಪೋರ್ಟ್ಸ್ ಕ್ಲಬ್ ಗದಗ-ಬೆಟಗೇರಿ, ರೈಲ್ವೆ ಅಟೋ ಸ್ಟ್ಯಾಂಡ್ ಸರ್ವಸದಸ್ಯರು, ಗುರು-ಹಿರಿಯರು, ಬೇನುಭಾಟ ಸಮಾಜದ ಮುಖಂಡರು, ಯುವಕರು, ಹಾಕಿ ಅಭಿಮಾನಿಗಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here