ಬೆಳಗಾವಿ: ತಹಶೀಲ್ದಾರ್ ಕಚೇರಿಯಲ್ಲಿ ಎಸ್ ಡಿಎ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆದು ಅಗಲಿದ ಎಸ್ಡಿಎ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,
ಇಂಥ ಘಟನೆಗಳು ನಡೆಯಬಾರದು, ಮಂಗಳವಾರ ಬಹಳ ಬ್ಯೂಸಿಯಾಗಿದ್ದ ಕಾರಣ ವಿಷಯದ ಬಗ್ಗೆ ತನ್ನಲ್ಲಿ ಮಾಹಿತಿ ಇಲ್ಲ, ಆದರೆ ಎಸ್ಡಿಎ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು, ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಹೊರಬರಬೇಕು ಎಂದು ಹೇಳಿದರು.
ಇನ್ನೂ ನಾನ್ಯಾವತ್ತೂ ರುದ್ರಣ್ಣನನ್ನು ಭೇಟಿಯಾಗಿಲ್ಲ. ಯಾವುದೇ ಕೆಲಸಕ್ಕೂ ಸಂಪರ್ಕ ಮಾಡಿಲ್ಲ. ಪ್ರಾಥಮಿಕ ತನಿಖೆ ಆರಂಭವಾಗಿದೆ. ಮಂತ್ರಿ ಎಂದ ಮೇಲೆ 10-15 ಜನ ಆಪ್ತ ಸಹಾಯಕರು ಇರುವುದು ಸ್ವಾಭಾವಿಕ. ಕ್ಷೇತ್ರದ ಕೆಲಸ, ಇತರೆ ಕೆಲಸಗಳಿಗೆ ಪಿಎಗಳನ್ನು ನೇಮಕ ಮಾಡಿಕೊಂಡಿರುತ್ತೇವೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ. ನಾನೇನೂ ಹೆಚ್ಚಿಗೆ ಹೇಳೋದಿಲ್ಲಎಂದರು.