ವಿಜಯಸಾಕ್ಷಿ ಸುದ್ದಿ, ಗದಗ: ಕಲಾಕುಂಜ ಫೌಂಡೇಶನ್ ಬಿವಾಡಿ ರಾಜಸ್ಥಾನ, ಅಲವರ ಇವರು ಲಲಿತ ಕಲೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗೆ ಕೊಡಮಾಡುವ 2024-25ನೇ ಸಾಲಿನ ಬೆಸ್ಟ್ ಸ್ಕೂಲ್ ಅವಾರ್ಡ್ ಈ ಬಾರಿ ಬೆಟಗೇರಿಯ ನಗರದ ಎಸ್.ಎಸ್.ಕೆ. ಶ್ರೀ ಜಗದಂಬಾ ಆಂಗ್ಲೋ ಮಾದ್ಯಮ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಲಭಿಸಿದೆ.
2023-24ನೇ ಸಾಲಿನಲ್ಲಿ ಮತ್ತು ಈ ಪ್ರಸಕ್ತ ವರ್ಷದಲ್ಲಿ ಸಾಂಸ್ಕೃತಿಕ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಸತತ ಎರಡು ವರ್ಷದಲ್ಲಿ ಐದು ರಾಜ್ಯಮಟ್ಟ ಮತ್ತು ಏಳು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದಿರುವದನ್ನು ಗಮನಿಸಿ ಹಾಗೂ ಚಿತ್ರಕಲೆಯಲ್ಲಿ 82 ಟಾಪ್ ಟೆನ್ ಪ್ರಶಸ್ತಿಯನ್ನು ಪಡೆದ ಮಕ್ಕಳಲ್ಲಿ ಅಡಗಿರುವ ಅಮೃತಾತ್ಮಕ ಕಲೆಯನ್ನು ತಿಳಿಸುವ ಮೂಲಕ ಅತಿಹೆಚ್ಚು ಮಕ್ಕಳನ್ನು ಸ್ಮರಣಾತ್ಮಕವಾಗಿ ಭಾಗವಹಿಸುವುದನ್ನು ಗಮನಿಸಿ ಈ ಸಾಲಿನ ಪ್ರಶಸ್ತಿಯನ್ನು ಎಸ್.ಎಸ್.ಕೆ. ಶ್ರೀ ಜಗದಂಬಾ ಶಿಕ್ಷಣ ಸಮಿತಿ ಪ್ರಶಸ್ತಿಯನ್ನು ನೀಡಿದೆ.
ಸಂಸ್ಥೆಯ ಚೇರಮನ್ ಗೋವಿಂದರಾಜ ವಿ.ಬಸವಾ, ವೈಸ್ ಚೇರಮನ್ ದತ್ತು ಯು.ಪವಾರ, ಎಸ್.ಎಸ್.ಕೆ ಪಂಚ ಟ್ರಸ್ಟ್ ಕಮಿಟಿ ಅಧ್ಯಕ್ಷ ಲೋಕನಾಥ ಬಿ.ಕಬಾಡಿ, ಸದಸ್ಯರಾದ ಸತ್ಯನಾರಾಯಣಸಾ ಕಬಾಡಿ, ಪಂಚ ಟ್ರಸ್ಟ್ ಕಮಿಟಿಯ ಎಲ್ಲ ಸದಸ್ಯರು, ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯೆ ಎಸ್.ಡಿ. ಬೆಣಕಲ್, ಸಿ.ಎಸ್. ಹವಳದ ಅವರು ಶಾಲಾ ಶಿಕ್ಷಕರ ಬಳಗ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆಂದು ಜಾಕೀರಹುಸೇನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



