ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಬೆಂಗಳೂರಿನ ಜನಸಿರಿ ಫೌಂಡೇಶನ್ ಕೊಡಮಾಡುವ 2025ನೇ ಸಾಲಿನ `ಅತ್ಯುತ್ತಮ ಶಿಕ್ಷಕಿ’ ಪುರಸ್ಕಾರವನ್ನು ಹಾವೇರಿ ಜಿಲ್ಲೆಯ ಶಿಗ್ಗಾವ್ ತಾಲೂಕಿನ ಬಂಕಾಪುರದ ಸುವರ್ಣ ಮಾಳಗಿಮನಿ ಅವರಿಗೆ ಸಂದಿದೆ.
ಬೆಂಗಳೂರಿನ ಕುವೆಂಪು ರಸ್ತೆಯಲ್ಲಿ ಮೈಸೂರು ಬ್ಯಾಂಕ್ ಹತ್ತಿರ ಇರುವ ಶಿಕ್ಷಕರ ಸದನದಲ್ಲಿ ಜನಸಿರಿ ಫೌಂಡೇಶನ್ ವಾರ್ಷಿಕ ಸಾಹಿತ್ಯ ಮತ್ತು ಸಂಸ್ಕೃತಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಹಾವೇರಿ ಜಿಲ್ಲೆ ಹೊಸಮಠದ ಪರಮಪೂಜ್ಯ ಬಸವಲಿಂಗ ಮಹಾಸ್ವಾಮಿಗಳು, ಜನಸಿರಿ ಫೌಂಡೇಶನ್ ಮುಖ್ಯಸ್ಥರಾದ ನಾಗಲೇಕರ, ಚಲನಚಿತ್ರ ನಟರಾದ ಮುಖ್ಯಮಂತ್ರಿ ಚಂದ್ರು, ಗುರುರಾಜ್ ಹೊಸಕೋಟಿ, ಡಿಂಗ್ರಿ ನಾಗರಾಜ್, ಮಿಮಿಕ್ರಿ ಸದಾನಂದ, ಜನಸಿರಿ ಫೌಂಡೇಶನ್ ಮುಖ್ಯಸ್ಥರಾದ ನಾಗಲೇಖ ಮುಂತಾದವರಿದ್ದರು.



