ವಿಜಯಸಾಕ್ಷಿ ಸುದ್ದಿ, ಗದಗ : ಪ್ರಖ್ಯಾತ ಪ್ರವಚನಕಾರ, ವಾಗ್ಮಿ ಡಾ. ಪಾವಗಡ ಪ್ರಕಾಶರಾವ್ ಅವರಿಂದ ಭಗವದ್ಗೀತಾ ಪ್ರವಚನ ಕಾರ್ಯಕ್ರಮವನ್ನು ನ.11ರಿಂದ ನ.28ರವರೆಗೆ ಪ್ರತಿ ದಿನ ಸಂಜೆ 6ರಿಂದ 7.30ರವರೆಗೆ ನಗರದ ಕಳಸಾಪೂರ ರಸ್ತೆಯ ನಂದೀಶ್ವರ ನಗರದಲ್ಲಿರುವ ಸದಾಶಿವಾನಂದ ಗಾರ್ಡನ್ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.
ನಗರದ ಪ್ರತಿಕಾ ಭನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಚನ ಕಾರ್ಯಕ್ರಮದ ಉದ್ಘಾಟನೆಯು ನ.11ರಂದು ಸಂಜೆ 5 ಗಂಟೆಗೆ ನೆರವೇರಲಿದೆ. ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಅಭಿನವ ಶಿವಾನಂದ ಶ್ರೀಗಳು ವಹಿಸಲಿದ್ದಾರೆ. ನಿರ್ಭಯಾನಂದ ಸರಸ್ವತಿ ಶ್ರೀಗಳು ಸಮ್ಮುಖ ವಹಿಸಲಿದ್ದಾರೆ ಎಂದರು.
ನಾವೆಲ್ಲ ಒಂದು ಎನ್ನುವ ಭಾವ ಈ ಸಮಾಜದಲ್ಲಿ ಬೆಳೆಸಬೇಕಿದೆ. ‘ಒಂದು’ ಎನ್ನುವ ಭಾವ ಒಡೆದರೆ ಸಮಾಜದಲ್ಲಿ ಬೆಳವಣಿಗೆ ಅಸಾಧ್ಯ. ಸಮಾಜದಲ್ಲಿ ಏಕತೆ ರೂಪಿಸಲು ಕಳೆದೆ ಕೆಲ ವರ್ಷಗಳಿಂದ ಪ್ರಕಾಶ ರಾವ್ ಅವರ ಪ್ರವಚನ ನಡೆಯುತ್ತ ಬಂದಿದೆ. ಈ ವರ್ಷವೂ ಮುಂದುವರೆಯಲಿದೆ ಎಂದು ಡಿ.ಆರ್. ಪಾಟೀಲ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಎಸ್.ಬಿ. ಶೆಟ್ಟರ, ಶಂಕರ್ ಹೂಗಾರ, ವಾದಿರಾಜ ರಾಯ್ಕರ್, ಡಾ. ಕಲ್ಲೇಶ ಮೂರಶಿಳ್ಳಿನ, ಅನಿಲ ವೈದ್ಯ, ಗುರಣ್ಣ ಬಳಗಾನೂರ, ಅಶೋಕ ಮಂದಾಲಿ, ಕೋಟಿ ಮುಂತಾದವರು ಇದ್ದರು.
ಆದರ್ಶ ಸಮಾಜ ಕಟ್ಟಲು, ಪ್ರೇರಣೆ ಪಡೆಯಲು, ಶ್ರೇಷ್ಠ ಉಪನ್ಯಾಸಕ್ಕೆ ಈ ಪ್ರವಚನ ಆಲಿಸುವುದು ಸೂಕ್ತ. ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕಾರ್ಯಕ್ರಮಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು, ಮಾಜಿ ಶಾಸಕರು ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸುವರು ಎಂದು ಡಿ.ಆರ್. ಪಾಟೀಲ ಮಾಹಿತಿ ನೀಡಿದರು.