ಬೆಂಗಳೂರು: ಆನ್ ಲೈನ್ ವಂಚಕರು ವಂಚನೆಗೆ ಹೊಸ ವಿಧಾನಗಳನ್ನು ಹುಡುಕಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಫೇಸ್ ಬುಕ್ ಖಾತೆಗಳನ್ನು ಹ್ಯಾಕ್ ಮಾಡುವ ಮೂಲಕ ವಂಚಿಸುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಇದೀಗ ಸಚಿವ ಬೈರತಿ ಸುರೇಶ್ ಅವರ ಫೇಸ್‌ಬುಕ್ ಖಾತೆಯಿಂದ ಬೆದರಿಸುವ, ಅವಾಚ್ಯ ಪದ ಬಳಸಿ ಕಮೆಂಟ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬೆನ್ನಲ್ಲೆ ಸಚಿವರು ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಹಾಕಿದೆ ಎಂದು ಪೋಸ್ಟ್ ಹಾಕಿದ್ದಾರೆ.
ಹೌದು ಭೈರತಿ ಸುರೇಶ್ ಪೋಸ್ಟ್ಗೆ ಕಮೆಂಟ್ ಕಾರ್ತಿಕ್ ಎಂಬ ವ್ಯಕ್ತಿ “ಇದೆಲ್ಲ ನಾಟಕ, ಜನ ಮೂರ್ಖರೆಂದು” ಕಮೆಂಟ್ ಮಾಡಿದ್ದರು. ಕಾರ್ತಿಕ್ ಅವರ ಈ ಕಮೆಂಟ್ ಕಾಮೆಂಟ್ ನೋಡಿ ಕೆರಳಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ನಿನ್ನ ಅಡ್ರೆಸ್ ಕೊಡು ಹೊಡೆದು ಹಾಕ್ತೀನಿ. ನಿನ್ನ ಅಪ್ಪನಿಗೆ ಹುಟ್ಟಿದ್ರೆ ಅಡ್ರೆಸ್ ಹಾಕು,
ಸೂ… ಎಂದೆಲ್ಲಾ ಬೈರತಿ ಸುರೇಶ್ ಕಮೆಂಟ್ ಮಾಡಿದ್ದಾರೆ ಎನ್ನಲಾದ ಫೋಟೋಗಳು ವೈರಲ್ ಆಗುತ್ತಿವೆ. ಫೇಸ್ಬುಕ್ ಕಾಮೆಂಟ್ಗಳನ್ನು ಯಾರೋ ಸ್ಕ್ರೀನ್ಶಾಟ್ ತೆಗೆದಿದ್ದಾರೆ. ಈ ಸ್ಕ್ರೀನ್ಶಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಫೋಟೋಗಳು ವೈರಲ್ ಆಗುತ್ತಿದ್ದಂತೆ ಕಮೆಂಟ್ಗಳನ್ನು ಡಿಲೀಟ್ ಮಾಡಲಾಗಿದೆ. ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ. ಈ ರೀತಿಯ ಮೆಸೇಜ್‌ಗಳಿಗೆ ಯಾರು ಕೂಡ ಅನ್ಯತಾ ಭಾವಿಸಬೇಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ.