ವಿಘ್ನ ನಿವಾರಕನಿಗೆ ಭಕ್ತಿಯ ವಿದಾಯ

0
Bhakti's Farewell to Vighna Varaka
Spread the love

ವಿಜಯಸಾಕ್ಷಿ ಸುದ್ದಿ, ಬೆಟಗೇರಿ : ಇಲ್ಲಿನ ಶ್ರೀ ಸಾರ್ವಜನಿಕ ಗಜಾನನ ಉತ್ಸವ ಮಂಡಳಿಯಿಂದ 2024ನೇ ಸಾಲಿನ 49ನೇ ಗಣೇಶೋತ್ಸವ ವಿಜೃಂಭಣೆಯಿಂದ ಜುರಗಿ, ನೂರಾರು ಭಕ್ತರನ್ನೊಳಗೊಂಡಂತೆ ವಾದ್ಯ ಮೇಳದೊಂದಿಗೆ ಅದ್ದೂರಿಯಾಗಿ ಭಕ್ತಿಯ ವಿದಾಯ ಹೇಳಲಾಯಿತು.

Advertisement

ಗಜಾನನ ಮಂಡಳಿಯಲ್ಲಿ 10 ದಿನಗಳಿಂದ `ಯಾತಾಳ ಚನ್ನಬಸಪ್ಪಜ್ಜ’ ದೃಶ್ಯಾವಳಿಗಳನ್ನು ಸಾವಿರಾರು ಸಂಖ್ಯೆಯಲ್ಲಿ ಅವಳಿ ನಗರದ ಜನತೆಯಲ್ಲದೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಜನರು ವೀಕ್ಷಿಸಿದರು. ಗಜಾನನ ಮಂಡಳಿಯಲ್ಲಿ ಮಂಡಳಿಯ ಕಾರ್ಯಕರ್ತರಿಗೆ ಸನ್ಮಾನ, ಫಲ-ಪುಷ್ಪಗಳ ಲಿಲಾವು ಜರುಗಿತು.

ಪ್ರತಿವರ್ಷದಂತೆ ಈ ವರ್ಷವೂ ಗಣೇಶೋತ್ಸವಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ-ಸಹಕಾರ ನೀಡಿದ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ, ವಿದ್ಯುತ್ ಇಲಾಖೆಯ ಸಿಬ್ಬಂದಿಗಳಿಗೆ, ನಗರಸಭೆಯ ಪೌರಕಾರ್ಮಿಕರಿಗೆ, ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ, ಓಣಿಯ ಗುರು-ಹಿರಿಯರಿಗೆ, ಸಂಘದ ಕಾರ್ಯಕರ್ತರಿಗೆ, ಪದಾಧಿಕಾರಿಗಳಿಗೆ ಹಾಗೂ ಅವಳಿ ನಗರದ ಎಲ್ಲ ಜನತೆಗೂ ಸಂಘದ ಅಧ್ಯಕ್ಷ ಉದಯ ವರ್ಣೇಕರ್ ಧನ್ಯವಾದಗಳನ್ನು ತಿಳಿಸಿದರು.


Spread the love

LEAVE A REPLY

Please enter your comment!
Please enter your name here