ಗದಗ:- ನೂತನ ದೇವಸ್ಥಾನ ಉದ್ಘಾಟನೆ ವೇಳೆ ಸಿಎಂ ಸಿದ್ದರಾಮಯ್ಯ ಅವರು ಭಂಡಾರ ಹಚ್ಚಿಸಿಕೊಳ್ಳಲು ನಿರಾಕರಿಸಿದ್ದು, ಇದು ಬಹಳ ಚರ್ಚೆಗೆ ಗ್ರಾಸವಾಗಿದೆ.
ಹೌದು, ಗದಗ ತಾಲೂಕಿನ ಸುಕ್ಷೇತ್ರ ಹರ್ಲಾಪುರ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಹಾಗೂ ಶ್ರೀ ಮಾಳಿಂಗರಾಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಉದ್ಘಾಟಿಸಿ ಬಳಿಕ CM ಸಿದ್ದರಾಮಯ್ಯ ಅವರು ಭಂಡಾರ ಹಚ್ಚಿಸಿಕೊಳ್ಳಲು ನಿರಾಕರಿಸಿದ್ದಾರೆ.
ಸಿದ್ದರಾಮಯ್ಯ ಅವರು ಭಂಡಾರ ನಿರಾಕರಿಸಿರುವುದು ಇದೇನು ಮೊದಲಲ್ಲ. ಹಿಂದೆಲ್ಲಾ ಯಾವುದೇ ದೇವಸ್ಥಾನಕ್ಕೆ ಹೋದಾಗಲೂ ಕುಂಕುಮ ಹಚ್ಚಿಸಿಕೊಳ್ಳಲು ನಿರಾಕರಿಸುತ್ತಾರೆ. ಅದರಂತೆ ಗದಗದಲ್ಲೂ ಇಂದು ಅದೇ ದೃಶ್ಯ ಮರುಕಳಿಸಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇದು ಹಿಂದೂ ವಿರೋಧಿ ನಡೆ ಎಂದು ಕೆಲವರು ಆರೋಪಿಸಿದ್ದಾರೆ.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬಸವಣ್ಣನವರ ವಚನಗಳನ್ನು ನೆನೆದಿದ್ದಾರೆ.
ಅನಾದಿ ಕಾಲದಿಂದಲೂ ಜನ ದೇವಸ್ಥಾನ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡುವ ಸಂಸ್ಕೃತಿ ರೂಡಿಯಲ್ಲಿದೆ. ದೇವರನ್ನು ಭಕ್ತಿಯಿಂದ ಪೂಜೆ ಮಾಡಿದರೆ ದೇವರು ನಮಗೆ ವರ ನೀಡುವದರ ಮೂಲಕ ನಮ್ಮಕಷ್ಟ ಕಾರ್ಪಣ್ಯಗಳು ದೂರಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ.
ಉಳ್ಳವರು ದೇವಾಲಯ ಮಾಡುವರು, ನಾನೇನು ಮಾಡಲಿ ನಾನು ಬಡವನ್ನಯ್ಯ, ಕಾಲೇ ಕಂಬಗಳು, ಶಿರವೇ ಹೊನ್ನ ಕಳಶವಯ್ಯ ಎಂಬ ಬಸವಣ್ಣನವರ ವಚನವನ್ನು ಸ್ಮರಿಸಿದರು.
ದೇವರು ಸರ್ವವ್ಯಾಪಿಯಾಗಿದ್ದು ನಮ್ಮ, ಬದುಕು, ನಡುವಳಿಕೆಯಲ್ಲಿ ಇನ್ನೊಬ್ಬರಿಗೆ ಅನ್ಯಾಯ, ಕೆಟ್ಟದನ್ನು ಮಾಡಬಾರದು. ಈ ಗ್ರಾಮ ಭಾವಕೈತ್ಯೆಯಿಂದ, ಸೌಹಾರ್ದತೆಯಿಂದ ಬದುಕುತ್ತಿರುವುದು ಶ್ಲಾಘನೀಯ. ಇದೇ ರೀತಿ ಇಡೀ ದೇಶದಲ್ಲಿ ಪ್ರತಿಯೊಬ್ಬರು ಬದುಕ ಬೇಕು.
ಯಾವುದೇ ಧರ್ಮವು ಪ್ರೀತಿ ಮಾಡು ಅಂತ ಹೇಳುತ್ತದೆ ಹೊರತು ಪರಸ್ಪರ ದ್ವೇಷ ಮಾಡುವಂತೆ ಹೇಳುವುದಿಲ್ಲ. ಧರ್ಮದ ಪ್ರಕಾರ ಪ್ರತಿಯೊಬ್ಬರೂ ಮನುಷ್ಯರಂತೆ ಬದುಕಬೇಕು ಹೊರತು ಮೃಗಗಳಂತೆ ಜೀವಿಸಬಾರದು.
ಬೇರೆಯವರ ಮೇಲೆ ದಯೆ ತೋರುವಂತಹ ಲಕ್ಷಣಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ರಾಜ್ಯದ ಜನರ ಆಶೀರ್ವಾದದಿಂದ ಎರಡನೇ ಬಾರಿ ಮುಖ್ಯ ಮಂತ್ರಿಯಾಗುವ ಅವಕಾಶ ದೊರಕಿದೆ. ಜನರಿಗೆ ನೀಡಿದ ಐದು ಗ್ಯಾರಂಟಿಗಳ ಭರವಸೆಗಳನ್ನು ಕೊಟ್ಟ ಮಾತಂತೆ ನೆರವೇರಿಸುವುದರ ಮೂಲಕ ಅರ್ಹ ಫಲಾನುಭವಿಗಳಿಗೆ ದೊರಕಿಸುವುದರ ಮೂಲಕ ನುಡಿದಂತೆ ನಡೆದ ಸರ್ಕಾರ ನಮ್ಮ ಸರ್ಕಾರವಾಗಿದೆ ಎಂದರು.
ಬಡವರು ಯಾರೂ ಕೂಡ ಇನ್ನೊಬ್ಬರಲ್ಲಿ ಕೈ ಒಡ್ಡದಂತೆ, ಯಾರೂ ಹಸಿವಿನಿಂದ ಮಲಗಬಾರದು ಎನ್ನುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ಒಂದು ಕೋಟಿಗೂ ಅಧಿಕ ಮಹಿಳೆಯರು ಗೃಹ ಲಕ್ಮ್ಷೀ ಯೋಜನೆಯಲ್ಲಿ ಪ್ರತಿ ಮಾಹೆ ಎರಡು ಸಾವಿರ ರೂ ಗಳನ್ನು ಪಡೆಯುತ್ತಿದ್ದಾರೆ ಎಂದರು.
ಎಳೂವರೆ ಕೋಟಿ ಜನರಲ್ಳಿ ನಾಲ್ಕು ವರೆ ಕೋಟಿ ಜನರಿಗೆ ಈ ಸೌಲಭ್ಯಗಳನ್ನು ಒದಗಿಸುವದರ ಮೂಲಕ ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಲಾಗುತ್ತಿದೆ.
ಬಹು ದಿನಗಳ ನಂತರ ತಮ್ಮ ಗ್ರಾಮಕ್ಕೆಆಗಮಿಸಿರುತ್ತೇನೆ, 1991 ರಲ್ಲಿ ಕೊಪ್ಪಳ ಲೋಕಸಭಾ ಸ್ಪಧಿಸಿದ ಸಮಯದಲ್ಲಿ ಹರ್ಲಾಪುರ ಹಾಗೂ ಮುಂಡರಗಿಜನ ಆಶೀರ್ವಾದ ಮಾಡಿದ್ದರು. ಇದನ್ನು ಮರೆಯಲು ಸಾಧ್ಯವಿಲ್ಲ.
ಅಖಂಡ ಧಾರವಾಡ ಜಿಲ್ಲೆ ಮೂರು ಜಿಲ್ಲೆಗಳಾಗಿ ವಿಂಗಡನೆಯಾದಾಗಾ ಮುಂಡರಗಿ ಲೋಕಸಭಾ ಕ್ಷೇತ್ರವು ಕೊಪ್ಪಳ ಲೋಕಸಭಾ ಮತಕ್ಷೇತ್ರಕ್ಕೆ ಸೇರುತ್ತಿತ್ತು. ಆ ಸಮಯದಲ್ಲಿ ನನಗೆ ಮತ ನೀಡಿ ಆಶೀರ್ವದಿಸಿದ್ದನ್ನು ಸದಾ ಸ್ಮರಿಸುತ್ತೇನೆ ಎಂದರು.