ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇಲ್ಲಿನ ಮೇಗೇರಿಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳ ಮಕ್ಕಳ ನಾಯಕತ್ವ ಶಿಬಿರದ ಉದ್ಘಾಟನಾ ಸಮಾರಂಭ ಜರುಗಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್. ನಾಣಕಿನಾಯ್ಕ ಅವರು ಶಿಬಿರವನ್ನು ಉದ್ಘಾಟಿಸಿದರು.
ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ರೇಣುಕಾ ತುಳಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಚ್. ಭಜಂತ್ರಿ, ಹಿರಿಯ ಪತ್ರಕರ್ತರಾದ ಜೆ.ಬಿ. ಹೆಸರೂರ, ಬಿ.ಆರ್.ಸಿ. ಸಂಪನ್ಮೂಲ ವ್ಯಕ್ತಿ ದೀಪಾಲಿ, ಶಿಕ್ಷಕಿ ಪಿ.ಬಿ. ಅಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಪ್ರಧಾನ ಗುರುಗಳಾದ ಎಚ್.ವಾಯ್. ಹೊಸಮನಿ ಸ್ವಾಗತಿಸಿದರು. ಭಾರತ ಸೇವಾದಳ ಜಿಲ್ಲಾ ಸಂಘಟಕರಾದ ಕುಮಾರಸ್ವಾಮಿ ಹೆಚ್.ಬಳ್ಳಾರಿ ಶಿಬಿರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕಾ ಕಾರ್ಯದರ್ಶಿ ಎಮ್.ಜಿ. ಮಾಂಡ್ರೆ ನಿರೂಪಿಸಿದರು. ತಾಲೂಕಾ ಅಧಿನಾಯಕಿ ವಾಯ್.ಎ. ಶಿರಹಟ್ಟಿ ವಂದಿಸಿದರು. ಶಿಬಿರದಲ್ಲಿ ಭಾರತ ಸೇವಾದಳ ಸ್ವಯಂಸೇವಕ ಮಕ್ಕಳು ಭಾಗವಹಿಸಿದ್ದರು.