ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಧಾರ್ಮಿಕ ಕಾರ್ಯಗಳಿಂದ ಪುಣ್ಯ ಲಭಿಸುತ್ತದೆ. ಇಂತಹ ಕಾರ್ಯಗಳು ಸಮಾಜದಲ್ಲಿ ಶಾಂತಿ, ನೆಮ್ಮದಿ ತರುತ್ತವೆ ಮತ್ತು ಸಮಾಜದಲ್ಲಿ ಅನಾಚಾರ ತಡೆಯಲು ಸಹಕಾರಿಯಾಗುತ್ತವೆ. ಜೊತೆಗೆ, ಇವುಗಳು ಮನಸ್ಸಿಗೆ ಮುದ ನೀಡುತ್ತವೆ ಎಂದು ಅಬ್ಬಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ರಾಠೋಡ ಹೇಳಿದರು.
ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಶ್ರೀ ಶೆಟ್ಟೆಮ್ಮದೇವಿ ಮಹಾದ್ವಾರದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಮಾಜದ ಒಳಿತಿಗಾಗಿ, ಆಚಾರ-ವಿಚಾರಗಳಿಗೆ ಪ್ರೋತ್ಸಾಹ ನೀಡಲು ಧಾರ್ಮಿಕ ಕಾರ್ಯಗಳು ಅತ್ಯಗತ್ಯವಾಗಿವೆ. ಯಾವುದೇ ಧರ್ಮದ ಆಚರಣೆಗಳು ಮಾನವನ ಒಳಿತಿಗಾಗಿ ಇರುತ್ತವೆ ಎಂದರು.ಉಪಾಧ್ಯಕ್ಷೆ ಜ್ಯೋತಿ ತೆಗ್ಗಿನಕೇರಿ, ಅಕ್ಕಮ್ಮ ಡೊಳ್ಳಿಣಿ,
ತಳವಾರ, ಸುರೇಶ ನಾಯ್ಕರ್, ಸಚಿನ್ ಪಾಟೀಲ, ಬಸವರಾಜ ಕಮ್ಮಾರ, ನೀಲಪ್ಪ ದ್ವಾಸಲ, ಹನಮಂತಪ್ಪ ದ್ವಾಸಲ, ಅಂದಪ್ಪ ವೀರಾಪೂರ, ಮಂಜುನಾಥ ಅಂಗಡಿ, ಬಸಪ್ಪ ಜಂತ್ಲಿ, ಭೋವಿ ಸಮಾಜದ ಅಧ್ಯಕ್ಷ ಬಾಲಪ್ಪ ಬಂಡಿವಡ್ಡರ, ಮಾರುತಿ ಬಂಡಿವಡ್ಡರ, ತಿಮ್ಮಣ್ಣ ಬಂಡಿವಡ್ಡರ, ಬಾಲಚಂದ್ರ ಬಂಡಿವಡ್ಡರ, ಹನುಮಂತ ಸೂಳಿಕೇರಿ ಇತರರಿದ್ದರು.



