ವಿಜಯಸಾಕ್ಷಿ ಸುದ್ದಿ, ಮುಳಗುಂದ: ಗದಗ ಲೋಕೋಪಯೋಗಿ ಇಲಾಖೆ ಉಪ ವಿಭಾಗ, 5054 ರಾಜ್ಯ ಹೆದ್ದಾರಿ ರಸ್ತೆ ಸೇತುವೆ ಸೇರಿದಂತೆ ಕುರತಕೊಟ್ಟಿ, ಅಂತೂರ, ಬೆಂತೂರ, ಚಿಂಚಲಿ, ಹರ್ತಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ಕಾನೂನು, ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನೆರವೇರಿಸಿದರು.
Advertisement
ಈ ಸಂದರ್ಭದಲ್ಲಿ ಕುರ್ತಕೋಟಿ ಗ್ರಾ.ಪಂ ಅಧ್ಯಕ್ಷ ಅಪ್ಪಣ್ಣಾ ಇನಾಮತಿ, ಪುಷ್ಪಾ ನಾಗಾವಿ, ಸಿದ್ದಲಿಂಗೇಶ ಪಾಟೀಲ, ಕುಮಾರ ಪುಜಾರ, ಮಲ್ಲಯ್ಯ ಕೊರವಣ್ಣನವರ, ಉಮೇಶ ನಾಯಕ, ಕೋಟ್ರೇಶ ವಿಭೂತಿ, ಕೆ.ಎಸ್. ಹಾದಿಮನಿ, ಎಂ.ಎಸ್. ಪಾಟೀಲ್, ಕಿರಣ ಕಿರೇಸೂರ, ರಮೇಶ ರಂಗಪ್ಪನವರ, ವಿಜಯ ಪೂಜಾರ, ಜಿ.ಆರ್. ಕತ್ತಿ, ಎಸ್.ಎನ್. ಕತ್ತಿ, ಶಿವಲಿಂಗಪ್ಪ ಬಾಲರೆಡ್ಡಿ, ಹೇಮಣ್ಣಾ ಬಾಲರೆಡ್ಡಿ, ಪಕ್ಕೀರೆಶ ಹಿರೇಮನಿ, ಮಹೇಶ್ ಪಟ್ಟಣಶೆಟ್ಟಿ, ಬಿ.ಟಿ. ಸೋಮರೆಡ್ಡಿ ಮುಂತಾದವರು ಇದ್ದರು.