ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರೋಣ ತಾಲೂಕಿನ ಜಕ್ಕಲಿ ಗ್ರಾಮ ಗಂಡು ಮೆಟ್ಟಿನ ನಾಡಾಗಿದ್ದು, ಇಲ್ಲಿನ ಅಂದಾನಪ್ಪ ದೊಡ್ಡಮೇಟಿ ಕನ್ನಡ ಕಲಿಯಾಗಿದ್ದಾರೆ. ಆದ್ದರಿಂದ ಈ ಸಾರೆಯ ಜಿಲ್ಲಾ ಸಮ್ಮೇಳನದ ಮೆರವಣಿಗೆಯನ್ನು ತಾಯಿ ಭುವನೇಶ್ವರಿಯ ಮೂಲ ನೆಲೆಯಾದ ಜಕ್ಕಲಿಯಿಂದ ಪ್ರಾರಂಭಿಸಲು ನಿರ್ಧರಿಸಿ ಇಂದು ಅದಕ್ಕೆ ಚಾಲನೆ ನೀಡುತ್ತಿದ್ದೇನೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಗಜೇಂದ್ರಗಡದಲ್ಲಿ ನಡೆದ 10ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಜಕ್ಕಲಿಯ ಅಂದಾನಪ್ಪ ದೊಡ್ಡಮೇಟಿಯವರ ಮನೆಯಿಂದ ಪ್ರಾರಂಭವಾದ ಭುವನೇಶ್ವರಿ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮೈಸೂರು ರಾಜ್ಯವೆಂದು ಹೆಸರಾಗಿದ್ದ ರಾಜ್ಯಕ್ಕೆ ಕರ್ನಾಟಕವೆಂದು ಹೆಸರನ್ನಿರಿಸಿಬೇಕೆಂದು ಹೋರಾಟ ಪ್ರಾರಂಭಿಸಿದವರಲ್ಲಿ ಅಂದಾನಪ್ಪ ದೊಡ್ಡಮೇಟಿಯವರು ಪ್ರಮುಖರು. ಕರ್ನಾಟಕ ಏಕೀಕರಣದ ಚಳವಳಿಗೆ ಚಾಲನೆ ನೀಡಿ ಅವಿರತ ಹೋರಾಟ ಮಾಡಿದ ಅಂದಾನಪ್ಪ ದೊಡ್ಡಮೇಟಿಯವರು ರಾಜ್ಯದಲ್ಲಿಯೇ ರೋಣ ತಾಲೂಕಿಗೆ ದೊಡ್ಡ ಹೆಸರು ತಂದುಕೊಟ್ಟರು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಸರ್ವರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಧುರೀಣರಾದ ಮಿಥುನ ಪಾಟೀಲ, ರೋಣ ತಹಸೀಲ್ದಾರ ನಾಗರಾಜ, ಸಿಪಿಐ ಎಸ್.ಎಸ್. ಬೀಳಗಿ, ನರೇಗಲ್ಲ ಪಿಎಸ್‌ಐ ಐಶ್ವರ್ಯ ನಾಗರಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಹುರಳಿ, ವಿ.ಬಿ. ಸೋಮನಕಟ್ಟಿಮಠ, ಜಕ್ಕಲಿ ಗ್ರಾ.ಪಂ ಅಧ್ಯಕ್ಷೆ ಗಂಗಮ್ಮ ಜಂಗಣ್ಣವರ, ಉಪಾಧ್ಯಕ್ಷೆ ಯಲ್ಲವ್ವ ಮಾದರ, ಸರ್ವ ಸದಸ್ಯರು, ದೊಡ್ಡಮೇಟಿ ಮನೆತನದ ರವೀಂದ್ರನಾಥ, ಶಿವನಾಗಪ್ಪ, ಚನ್ನಬಸಪ್ಪ, ಸಂದೇಶ, ಹರ್ಷವರ್ಧನ ದೊಡ್ಡಮೇಟಿ, ಎಚ್.ಎಸ್. ಸೋಂಪೂರ, ಎಂ.ಎಸ್. ದಢೇಸೂರಮಠ, ಮಲ್ಲಣ್ಣ ಮೇಟಿ, ಅಶೋಕಪ್ಪ ಯಾವಗಲ್ಲ, ಮೈಲಾರಪ್ಪ ಚಳ್ಳಮರದ, ಕಸಾಪ ಅಧ್ಯಕ್ಷ ಅಮರೇಶ ಗಾಣಿಗೇರ, ಜಿಲ್ಲಾ ಕಸಾಪ ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ, ತಾಲೂಕಾ ಕಾರ್ಯದರ್ಶಿ ಬಿ.ಬಿ. ಕುರಿ, ಸಾಹಿತಿ ಎಸ್.ಬಿ. ಹಿರೇಮಠ, ಎಂ.ಎಸ್. ಕೋರಿ ಮುಂತಾದವರಿದ್ದರು.
ಅಂದಾನಪ್ಪ ದೊಡ್ಡಮೇಟಿ ಅವರ ಧೀಮಂತ ಹೋರಾಟದ ಸವಿ ನೆನಪಿಗಾಗಿ ಭುವನೇಶ್ವರಿ ತಾಯಿಯ ಮೆರವಣಿಗೆಗೆ ಇಲ್ಲಿಂದಲೇ ಚಾಲನೆ ನೀಡುವ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕೆ ಗದಗ ಜಿಲ್ಲಾ ಕಸಾಪಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮತ್ತು ಅವರ ತಂಡದವರನ್ನಲ್ಲದೆ, ತಾಲೂಕಾ ಅಧ್ಯಕ್ಷ ಅಮರೇಶ ಗಾನಿಗೇರ ಅವರ ತಂಡದವರನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಶಾಸಕ ಪಾಟೀಲ ಹೇಳಿದರು.