ವಿಜಯಸಾಕ್ಷಿಸುದ್ದಿ, ಗಜೇಂದ್ರಗಡ : ದೇಶದ ರಕ್ಷಣೆ ಹಾಗೂ ಸರ್ವ ಸಮುದಾಯಗಳ ಅಭಿವೃದ್ಧಿ ಕಾರ್ಯಗಳ ತತ್ವ, ಸಿದ್ಧಾಂತಗಳಿಗೆ ಬದ್ಧವಾಗಿರುವ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಕುಷ್ಟಗಿ ರಸ್ತೆಯಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಕಾರ್ಯಾಲಯಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿರುವ ಕಾಂಗ್ರೆಸ್ ಪಕ್ಷವು ದೇಶದ ರಕ್ಷಣೆಗೆ ಕಟಿಬದ್ಧವಾಗಿ ಕೆಲಸ ಮಾಡುತ್ತಾ ಬಂದಿದೆ. ಪರಿಣಾಮ ದೇಶದ ವಿರುದ್ಧ ಕಾಲು ಕೆರೆದು ಬಂದ ವೈರಿ ರಾಷ್ಟ್ರಗಳ ಹೆಡೆಮುರಿ ಕಟ್ಟಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ.
ದೇಶಕ್ಕೆ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯನಂತರ ದೇಶಕ್ಕೆ ಕಾಂಗ್ರೆಸ್ ತನ್ನನ್ನು ಸಮರ್ಪಿಸಿಕೊಂಡು ಇಂದಿಗೂ ಸಹ ದೇಶದಲ್ಲಿನ ಸರ್ವ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇಂತಹ ಭವ್ಯ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದ ಕಟ್ಟಾಳು ಎನ್ನುವದಕ್ಕೆ ನನಗೆ ಹೆಮ್ಮೆಯಿದೆ. ನಮಗೆ ಭಾರತೀಯತೆ ಮತ್ತು ದೇಶಪ್ರೇಮದ ಪಾಠ ಕಲಿಸಲು ಬರುವವರು ಮೊದಲು ಕಾಂಗ್ರೆಸ್ ಪಕ್ಷದ ತ್ಯಾಗ ಹಾಗೂ ಬಲಿದಾನವನ್ನು ಸ್ಮರಿಸಲಿ ಎಂದರು.
ಈ ವೇಳೆ ಮಾಜಿ ಸಂಸದ ಆರ್.ಎಸ್. ಪಾಟೀಲ, ಸಿದ್ದಪ್ಪ ಬಂಡಿ, ವಿ.ಆರ್. ಗುಡಿಸಾಗರ, ಅಶೋಕ ಬಾಗಮಾರ, ಶ್ರೀಕಾಂತ ಅವಧೂತ, ಡಾ. ಆರ್.ಎಸ್. ಜೀರೆ, ರಾಜು ಸಾಂಗ್ಲೀಕರ, ಶರಣಪ್ಪ ಚಳಗೇರಿ, ರಫೀಕ್ ತೋರಗಲ್, ಬಸವರಾಜ ಹೂಗಾರ, ಶ್ರೀಧರ ಬಿದರಳ್ಳಿ, ಮುತ್ತಣ್ಣ ಮ್ಯಾಗೇರಿ, ಶರಣು ಪೂಜಾರ, ಅರ್ಜುನ ರಾಠೋಡ, ಅಪ್ಪು ಮತ್ತಿಕಟ್ಟಿ, ಸಿದ್ದು ಗೊಂಗಡಶೆಟ್ಟಿಮಠ ಮುಂತಾದವರಿದ್ದರು.