ಬಿಜೆಪಿಯಿಂದ ಅಭಿವೃದ್ಧಿಪರ ಕಾರ್ಯ : ಎಸ್.ವ್ಹಿ. ಸಂಕನೂರ

0
Bhumi Puja for various works of Gadag 26th Ward
Spread the love

ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದಲ್ಲಿ ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಆಡಳಿತವಿದ್ದಾಗ ಗದಗ-ಬೆಟಗೇರಿ ನಗರಸಭೆಗೆ ಸಾಕಷ್ಟು ಅನುದಾನ ಮಂಜೂರಾಗಿದ್ದು, ಹಲವಾರು ಅಭಿವೃದ್ಧಿಪರ ಕಾರ್ಯಗಳಾಗಿವೆ ಎಂದು ವಿ.ಪ ಸದಸ್ಯ ಎಸ್.ವ್ಹಿ. ಸಂಕನೂರ ಹೇಳಿದರು.
ಅವರು ಮಂಗಳವಾರ ಗದುಗಿನ 26ನೇ ವಾರ್ಡ್ನ ಕಮ್ಮಾರ ಸಾಲು ಪ್ರದೇಶದ ಅರಸಿದ್ಧಿ ಅಂಗಡಿಯಿಂದ ಜನತಾ ಬಜಾರವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಸೇರಿದಂತೆ ವಾರ್ಡ್ನ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರು ವಿಶೇಷ ಕಾಳಜಿ ವಹಿಸಿ ಗದಗ-ಬೆಟಗೇರಿ ಅವಳಿ ನಗರಕ್ಕೆ ನಗರೋತ್ಥಾನ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿಸಿದ್ದರು. ಕಾರಣಾಂತರದಿಂದ ಯೋಜನೆಗಳು ಅನುಷ್ಠಾನಗೊಂಡಿರಲಿಲ್ಲ. ಇದೀಗ ಈ ವಾರ್ಡ್ನ ನಗರಸಭಾ ಸದಸ್ಯೆ ಹುಲಿಗೆಮ್ಮ ಹಬೀಬ ಅವರು ಆಸಕ್ತಿ ವಹಿಸಿ ಈ ಪ್ರದೇಶದ ರಸ್ತೆ, ಚರಂಡಿ ಕೆಲಸ ಆಗುವಂತೆ ಮಾಡಿದ್ದಾರೆ ಎಂದರು.
ಈ ವಾರ್ಡ್ನ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಯನ್ನು ಕಾಲಮಿತಿಯೊಳಗೆ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಬೇಕು. ಯಾವುದೇ ವಿಷಯದಲ್ಲಿ ರಾಜಿ ಬೇಡ ಎಂದರಲ್ಲದೆ, ಈ ಭಾಗದಲ್ಲಿ ಕಾಮಗಾರಿ ನಡೆದಾಗ ಸಾರ್ವಜನಿಕರು, ಗ್ರೇನ್ ಮಾರ್ಕೆಟ್ ವ್ಯಾಪಾರಸ್ಥರು ಗುತ್ತಿಗೆದಾರರಿಗೆ ಸಹಕಾರ ನೀಡಿ ಕಾಮಗಾರಿ ಶೀಘ್ರವಾಗಿ ಮುಗಿಯುವಂತೆ ಸಹಕಾರ ನೀಡಬೇಕು. ಅಗತ್ಯ ಬಿದ್ದರೆ ಅಭಿವೃದ್ಧಿ ಕಾರ್ಯಕ್ಕೆ ಶಾಸಕರ ನಿಧಿಯಿಂದ ಆರ್ಥಿಕ ನೆರವು ನೀಡುವ ಭರವಸೆ ನೀಡಿದರು.
ರಾಜು ಕುರಡಗಿ, ಜಗನ್ನಾಥಸಾ ಭಾಂಡಗೆ ಮಾತನಾಡಿದರು. ರಾಘವೇಂದ್ರ ಹಬೀಬ ಸ್ವಾಗತಿಸಿದರು. ರಮೇಶ ಸಜ್ಜಗಾರ ನಿರೂಪಿಸಿದರು. ಭೀಮಸಿಂಗ್ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವರಾಜ ಕುರಗೋಡ, ವಿಜಯ ಸೋಳಂಕಿ, ಸಿದ್ದು ಪವಾರ, ಕೀರ್ತಿ ಕಾಂಬಳೇಕರ, ವಿಜಯ ಬನಹಟ್ಟಿ, ಗೋಪಾಲ ಪವಾರ, ಸುರೇಶ ಚವ್ಹಾಣ, ಬಡಿಗಣ್ಣವರ, ಅರಸಿದ್ಧಿ, ಭೂಸ್ತ ಮುಂತಾದವರು ಪಾಲ್ಗೋಂಡಿದ್ದರು.
26ನೇ ವಾರ್ಡ್ನ ನಗರಸಭಾ ಸದಸ್ಯೆ ಹುಲಿಗೆಮ್ಮ ಹಬೀಬ ಮಾತನಾಡಿ, ವಾರ್ಡ್ನಲ್ಲಿ ವಿವಿಧೆಡೆ ರಸ್ತೆ, ಚರಂಡಿ ನಿರ್ಮಾಣಕ್ಕಾಗಿ ನಗರೋತ್ಥಾನ 4ನೇ ಹಂತದಿಂದ 48 ಲಕ್ಷ ರೂ, ಜನರಲ್ ಫಂಡ್‌ನಿಂದ 28 ಲಕ್ಷ ರೂ, 15ನೇ ಹಣಕಾಸು ಅನುದಾನದಿಂದ 7 ಲಕ್ಷ ರೂ ಹಾಗೂ ಎಸ್.ಎಫ್.ಸಿ ಅನುದಾನದಿಂದ 9 ಲಕ್ಷ ರೂ.ಗಳ ಕಾಮಗಾರಿಗಳನ್ನು ಹಂತಹಂತವಾಗಿ ಮಾಡಲಾಗುತ್ತಿದ್ದು, ಅಭಿವೃದ್ಧಿ ಕಾರ್ಯಕ್ಕೆ ವಾರ್ಡ್ನ ಜನರು ಸಹಕಾರ ನೀಡಬೇಕೆಂದರು. 

Spread the love
Advertisement

LEAVE A REPLY

Please enter your comment!
Please enter your name here