ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆ ವಾರ್ಡ್ ನಂ. 13ರಲ್ಲಿ ನಗರಸಭೆಯ ಅನುದಾನದಲ್ಲಿ ವಕೀಲಚಾಳ ಭಾಗದ 8 ಲಕ್ಷ ರೂ ವೆಚ್ಚದಲ್ಲಿ ಡಾ. ಗೋಡಖಿಂಡಿಯವರ ಮನೆಯಿಂದ ಪೋತ್ನಿಸ್‌ರವರ ಮನೆಯವರೆಗೆ ಸಿ.ಸಿ ರಸ್ತೆಯ ಭೂಮಿ ಪೂಜೆಯನ್ನು ವಿ.ಪ ಸದಸ್ಯರಾದ ಎಸ್.ವ್ಹಿ. ಸಂಕನೂರ ನೆರವೇರಿಸಿದರು.
Advertisement
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮುತ್ತು ಮುಶಿಗೇರಿ, ಡಾ. ಕುಶಾಲ ಗೋಡಖಿಂಡಿ, ಡಾ. ಸುರೇಶ ಮಳ್ಳೂರ, ಡಾ. ವಿನಯ ಜೋಶಿ, ಗಿರೀಶ ಕುಲಕರ್ಣಿ, ದೀಪಕ ಪೈ, ಗಣೇಶ ನಾಯರಿ, ಶರಣಪ್ಪ ಇಟಗಿ, ಗಂಗಾವತಿ, ಸುರೇಶ, ವೇರ್ಣೇಕರ, ಶ್ರೀಮತಿ ಶೃತಿ ಮುತ್ತು ಮುಶಿಗೇರಿ, ಜಯಶ್ರೀ ಅಣ್ಣಿಗೇರಿ, ಕಲ್ಯಾಣಿ ಕಿರೇಸೂರ, ವಿದ್ಯಾ ಮೊರಬ, ಉಷಾ ಮೊರಬ, ಗಿರಿಜಾ ಶಿಂಧೆ ಉಪಸ್ಥಿತರಿದ್ದರು.