ಚಿಕ್ಕಮಗಳೂರು : ಭೂಪನೊಬ್ಬ ಪಿತೃ ಪಕ್ಷದ ಊಟಕ್ಕೆ ಹೋಗಲು ಪೊಲೀಸ್ ಜೀಪ್ ಕರೆಸಿಕೊಂಡ ಘಟನೆ ಜರುಗಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿ ಘಟನೆ ಜರುಗಿದೆ. ವ್ಯಕ್ತಿ ಮೊದಲು 112 ಗೆ ಫೋನ್ ಮಾಡಿ ಸರ್ ಇಲ್ಲಿ ಗಲಾಟೆ ಆಗುತ್ತಿದೆ ಬೇಗ ಬನ್ನಿ ಅಂತ ಮನವಿ ಮಾಡಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರಿಗೆ ಮಾವನ ಮನೆಗೆ ಡ್ರಾಪ್ ಮಾಡುವಂತೆ ಮನವಿ ಮಾಡಿದ್ದಾನೆ.
ಗಾಡಿ ಯಾವು ಇಲ್ಲ. ಮಳೆ ಬೇರೆ, ಪಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡುವಂತೆ ರಿಕ್ವೆಸ್ಟ್ ಮಾಡಿದ್ದಾನೆ. ಯುವಕನ ಮಾತು ಕೇಳಿ ಪೊಲೀಸರಿಗೆ ಒಂದು ಕ್ಷಣ ಬೈಯ್ಯಬೇಕೋ… ನಗಬೇಕೋ… ತಿಳಿಯಲಿಲ್ಲ. ತರುವೆ ಗ್ರಾಮದ ಅಶೋಕ್ ಎಂಬ ವ್ಯಕ್ತಿಯಿಂದ ಪೊಲೀಸರಿಗೆ ಫೋನ್ ಮಾಡಿರುವುದು ತಿಳಿದು ಬಂದಿದೆ.
ಮಾವನ ಮನೆಗೆ ಊಟಕ್ಕೆ ಹೊರಟಿದ್ದ ಅಶೋಕ್ ಗೆ ಪೊಲೀಸರು ಬುದ್ದಿವಾದ ಹೇಳಿದ್ದಾರೆ. ಕೊನೆಗೆ ಪೊಲೀಸರೇ ಲಾರಿ ಅಡ್ಡ ಹಾಕಿ ಆ ವ್ಯಕ್ತಿಯನ್ನ ಮಾವನ ಮನೆಗೆ ಕಳಿಸಿದ್ದಾರೆ ಎಂದು ತಿಳಿದು ಬಂದಿದೆ.