ಬೀದರ್:– ಕಳೆದ ಕೆಲವು ದಿನಗಳಿಂದ ಬೀದರ್ ಜಿಲ್ಲೆಯಲ್ಲಿ ಏಕಾಏಕಿ ಕಾಗೆಗಳು ಸರಣಿ ಸಾವನ್ನಪ್ಪುತ್ತಿದ್ದು, ಹೀಗಾಗಿ ಹಕ್ಕಿಜ್ವರದ ಶಂಕೆ ವ್ಯಕ್ತವಾಗಿದೆ.
ಒಂದೇ ದಿನ ಎರಡು ಕಾಗೆಗಳು ಸಾವು ಸೇರಿದಂತೆ ಹಲವು ದಿನಗಳಿಂದ ಕಾಗೆಗಳು ಅನುಮಾನಾಸ್ಪದವಾಗಿ ಜಿಲ್ಲೆಯಲ್ಲಿ ಸಾವನ್ನಪ್ಪುತ್ತಿದೆ. ಹಲವು ದಿನಗಳ ಹಿಂದೆ ಭಾಲ್ಕಿ ತಾಲೂಕಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಉದ್ದಗೀರನಲ್ಲಿ ಮೊದಲು ಹಕ್ಕಿಜ್ವರ ಹಾಣಿಸಿಕೊಂಡಾಗ ನೂರಾರು ಕಾಗೆಗಳು ಏಕಾಏಕಿ ಸಾವನ್ನಪ್ಪಿದವು. ಈಗ ಅದೇ ರೀತಿ ಭಾಲ್ಕಿಯಲ್ಲೂ ದಿನಾಲು ಕಾಗೆಗಳು ಸತ್ತು ಬೀಳುತ್ತಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಮಹಾರಾಷ್ಟ್ರ ಹಾಗೂ ತೆಲಂಗಾಣದ ಗಡಿಯಲ್ಲಿ ಪಶು ಇಲಾಖೆಯ ಅಧಿಕಾರಿಗಳು ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿದ್ದರೂ ಕಣ್ಣು ತಪ್ಪಿಸಿ ಜಿಲ್ಲೆಗೆ ಅಕ್ರಮವಾಗಿ ಕೋಳಿ ಸಾಗಾಣಿಕೆ ಮಾಡಲಾಗುತ್ತಿದೆ.
ನಿಗೂಢವಾಗಿ ಸಾವನ್ನಪ್ಪುತ್ತಿರುವ ಕಾಗೆಗಳ ಬಗ್ಗೆ ವೈದ್ಯಾಧಿಕಾರಿಗಳು ಪರಿಶೀಲಿಸಿ ಹಕ್ಕಿ ಜ್ವರದ ಆತಂಕ ನಿವಾರಿಸಬೇಕು ಎಂದು ಜನತೆ ಆಗ್ರಹ ಮಾಡಿದ್ದಾರೆ.