ನಟ ದರ್ಶನ್‌ಗೆ ಬಿಗ್ ರಿಲೀಫ್: ಮಹಿಳೆಗೆ ನಾಯಿ ಕಚ್ಚಿದ ಪ್ರಕರಣದಿಂದ ಕ್ಲೀನ್ ಚಿಟ್?

0
Spread the love

ಸ್ಯಾಂಡಲ್ ವುಡ್ ಸಾರಥಿ ನಟ ದರ್ಶನ್’ಗೆ ಬಿಗ್ ರಿಲೀಫ್ ಸಿಗುವ ಸಿಗುವ ಸಾದ್ಯತೆ ದಟ್ಟವಾಗಿದೆ. ನಟ ದರ್ಶನ್ ನಾಯಿ ಮಹಿಳೆಗೆ ಕಚ್ಚಿದ ಪ್ರಕರಣದಲ್ಲಿ  ಆರ್ ಆರ್ ನಗರ ಪೊಲೀಸರು ಡಿ ಬಾಸ್ ಗೆ ಕ್ಲೀನ್ ಚಿಟ್ ಕೊಡಲು ಮುಂದಾಗಿದ್ದಾರೆ ಏನ್ನುತ್ತಿದೆ ಪೊಲೀಸ್ ಮೂಲಗಳು.

Advertisement

ನಟ ದರ್ಶನ್ ಮನೆಯ ನಾಯಿ ಕಳೆದ ತಿಂಗಳು 28 ರಂದು ಅಮಿತಾ ಜಿಂದಾಲ್ ಎಂಬ ಮಹಿಳೆಗೆ ಕಚ್ಚಿದ್ದ ಕಾರಣ ನಾಯಿ ದಾಳಿಗೆ ಒಳಗಾದ ಮಹಿಳೆ ನಟ ದರ್ಶನ್ ಹಾಗೂ ಮನೆ ಕೆಲಸದವನ ವಿರುದ್ಧ ಪೊಲೀಸ್ ಠಾಣೆ ಕದತಟ್ಟಿದ್ದರು.

ಘಟನೆ ಸಂಬಂದ ದರ್ಶನ್ ಹಾಗೂ ಮನೆ ಕೆಲಸದವನ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಟ ದರ್ಶನ್ ಹಾಗೂ ಮನೆ ಕೆಲಸದವನಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿ ಘಟನೆ ಬಗ್ಗೆ ಇಬ್ಬರ ಬಳಿ ಆರ್ ಆರ್ ನಗರ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದರು.

ಪ್ರಕರಣದ ಆರೋಪಿಗಳಾಗಿದ್ದ ದರ್ಶನ್ ಹಾಗೂ ಮನೆ ಕೆಲಸದವನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಆರ್ ಆರ್ ನಗರ ಪೊಲೀರು ತಯಾರಿ ಮಾಡುತ್ತಿದ್ದಾರೆ.

ಪ್ರಕರಣದಲ್ಲಿ ದರ್ಶನ್ ಪಾತ್ರ ಅಷ್ಟಾಗಿ ಕಂಡು ಬರದ ಕಾರಣ ಪ್ರಕರಣದ ಚಾರ್ಜ್ ಶೀಟ್ ನಿಂದ  ನಟ ದರ್ಶನ್ ಕೈಬಿಟ್ಟು ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಮುಂದಾಗಿದ್ದಾರೆಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೇ.

ನಟ ದರ್ಶನ್ ಗೆ ಪ್ರಕರಣದಲ್ಲಿ  ಖಾಕಿ ಕ್ಲೀನ್ ಚಿಟ್ ಕೊಡುವ ತೀರ್ಮಾನಕ್ಕೆ ಬರಲು ಪ್ರಮುಖ ಕಾರಣಗಳು

  1.   ನಟ ದರ್ಶನ್ ಘಟನೆ ನಡೆದಾಗ ಘಟನ ಸ್ಥಳದಲ್ಲಿ ಇರಲಿಲ್ಲ
  2.  ನಾಯಿ ದಾಳಿಯ ದಿನ ದರ್ಶನ್ ಹೊರ ರಾಜ್ಯದಲ್ಲಿ ಶೂಟಿಂಗ್‌ನಲ್ಲಿದ್ದರು
  3.   ಘಟನೆ ನಡೆದ ದಿನ ದರ್ಶನ ಹೊರಗಡೆ ಇರೋದನ್ನ ಟವರ್ ಲೋಕೇಷನ್ ಮೂಲಕ ಖಾತ್ರಿ ಪಡಿಸಿಕೊಂಡಿರೋ ಪೊಲೀಸರು
  4.  ನಟ ದರ್ಶನ್ ನಾಯಿ ನೋಡಿಕೊಳ್ಳಲು ಕೆಲಸದವನ್ನ ನೇಮಕ ಮಾಡಿದ್ದರು
  5.  ಮಹಿಳೆ ದರ್ಶನ್ ವಿರುದ್ಧ ಮಾಡಿರೋ ಆರೋಪಗಳಿಗೆ ಸೂಕ್ತ ಸಾಕ್ಷ್ಯಗಳಿಲ್ಲ
  6.  ಕೆಲಸದವನು ಮಾಡಿರೋ ಎಡವಟ್ಟಿಗೆ ನಾಯಿ ದರ್ಶನ್ ದು ಅನ್ನೋ ಕಾರಣಕ್ಕೆ ದರ್ಶನ್ ಗೆ ಆರೋಪಿ
  7.  ಇಷ್ಟೇಲ್ಲ ಕಾರಣಗಳನ್ನ ಮುಂದಿಟ್ಟುಕೊಂಡು ದರ್ಶನ್ ನಾಯಿ ಮಹಿಳೆಗೆ ಕಚ್ಚಿದ ಪ್ರಕರಣದಲ್ಲಿ ದರ್ಶನ್ ಹೆಸರು ಕೈಬಿಟ್ಟು ಚಾರ್ಜ್ ಶೀಟ್ ಸಲ್ಲಿಸಲು ಮುಂದಾಗಿದ್ದಾರೆ ಪೊಲೀಸರು ಎಂದು ಪೊಲೀಸ್ ಮೂಲಗಳು ತಿಳಿಸಿವೇ.

Spread the love

LEAVE A REPLY

Please enter your comment!
Please enter your name here