ಕಿರುತೆರೆ ನಟಿ ಮೇಲಿನ ಅತ್ಯಾಚಾರ ಆರೋಪದ ಮೇಲೆ ಜೈಲು ಸೇರಿ ಬೇಲ್ ಮೇಲೆ ಹೊರ ಬಂದಿರುವ ನಟ ಮನು ಇದೀಗ ನಿರಾಳರಾಗಿದ್ದಾರೆ. ಮನು ವಿರುದ್ಧ ನೀಡಿದ್ದ ಅತ್ಯಾಚಾರ ಪ್ರಕರಣವನ್ನು ಸಂತ್ರಸ್ತೆ ಹಿಂಪಡೆದಿದ್ದು ಕೋರ್ಟ್ ನಲ್ಲಿ ತಾನು ಕೇಸ್ ವಾಪಸ್ ಪಡೆದುಕೊಳ್ಳುತ್ತಿರುವುದಾಗಿ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.
‘ಕಾಮಿಡಿ ಕಿಲಾಡಿಗಳು’ ಶೋ ಮೂಲಕ ಗುರುತಿಸಿಕೊಂಡ ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಇದರ ಜೊತೆಗೆ ಕನ್ನಡ ಚಿತ್ರರಂಗದ ಸ್ಟಾರ್ ನಟರ ಬಗ್ಗೆ ಮಾತನಾಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಜೊತೆಗೆ ಚಿತ್ರರಂಗದಿಂದ ಮನು ಅವರನ್ನು ಬಹಿಷ್ಕರಿಸಿದ್ದು ಮನು ಕ್ಷಮೆ ಕೇಳಿದ ಬಳಿಕ ಅದನ್ನು ಹಿಂಪಡೆಯಲಾಗಿತ್ತು.
ಸಹ ನಟಿಯ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರಣೆ ಧಾರವಾಡ ಹೈಕೋರ್ಟ್ನಲ್ಲಿ ನಡೆಯಬೇಕಿತ್ತು. ಈ ವೇಳೆ ಸಂತ್ರಸ್ಥೆಯು ವಕೀಲರ ಸಾಕ್ಷಿಯಾಗಿ ಮಡೆನೂರು ಮನು ಮುಂದೆಯೇ “ನಾನು ಖುಷಿಯಿಂದ ಕೇಸ್ ಹಿಂಪಡೆಯುತ್ತಿದ್ದೇನೆ” ಎಂದು ಹೇಳಿದ್ದಾರೆ.