ಬೆಂಗಳೂರು:- ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಅಸಂಸದೀಯ ಪದ ಬಳಕೆ ಮಾಡಿದ ಆರೋಪದಡಿ MLC ರವಿಕುಮಾರ್ ಗೆ ಹೈಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ.
ಜೂನ್ 8ರ ವರೆಗೆ ಬಂಧಿಸದಂತೆ ಆದೇಶ ನೀಡಿರುವ ಕೋರ್ಟ್, ತನಿಖೆಗೆ ಸಹಕರಿಸುವಂತೆ ರವಿಕುಮಾರ್ ಅವರಿಗೆ ಸೂಚನೆ ನೀಡಿದೆ. ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದು ಮಾಡುವಂತೆ ರವಿಕುಮಾರ್ ಸಲ್ಲಿಸಿದ್ದ ಅರ್ಜಿ ನ್ಯಾ.ಎಸ್.ಆರ್ ಕೃಷ್ಣಕುಮಾರ್ ಪೀಠದಲ್ಲಿ ವಿಚಾರಣೆ ನಡೆಯಿತು. ರವಿಕುಮಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಎಂಎಲ್‌ಸಿ ರವಿಕುಮಾರ್ ಅವರು ವಿಧಾನಸೌಧ ಬಳಿ ಪ್ರತಿಭಟನೆ ವೇಳೆ ಮಾತನಾಡಿದ್ದಾರೆ ಎನ್ನಲಾಗಿದೆ. ಟಿವಿಯಲ್ಲಿ ಮಾತನಾಡಿದ್ದಾರೆ ಎಂದು ದೂರುದಾರರು ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಮುಖ್ಯ ಕಾರ್ಯದರ್ಶಿ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ರವಿಕುಮಾರ್ ಮೆಚ್ಚುಗೆ ಸೂಚಿಸಿದ್ದಾರೆ. ಇದು ರಾಜಕೀಯ ದುರುದ್ದೇಶದ ಪ್ರಕರಣವಾಗಿದ್ದು, ಪೀಠಕ್ಕೆ ರವಿಕುಮಾರ್ ಏನು ಮಾತನಾಡಿದ್ದಾರೆ ಎಂಬುದರ ವಿಡಿಯೋವನ್ನು ಟ್ಯಾಬ್ ಮೂಲಕ ತೋರಿಸಿದ್ರು.
ಎಸ್‌ಪಿಪಿ ಬೆಳ್ಳಿಯಪ್ಪ ಪ್ರತಿವಾದ ಮಂಡಿಸಿ, ರವಿಕುಮರ್ 2ನೇ ಬಾರಿ ಹೀಗೆ ಮಾತನಾಡ್ತಿದ್ದಾರೆ. ಈ ಹಿಂದೆ ಮಹಿಳಾ ಜಿಲ್ಲಾಧಿಕಾರಿಯೊಬ್ಬರನ್ನ ಪಾಕಿಸ್ತಾನದ ಸಹೋದರಿ ಅಂದಿದ್ರು. ನಾವು ಇಲ್ಲಿ ಡಿಸೈಡ್ ಮಾಡೋದಕ್ಕೆ ಬರೋದಿಲ್ಲ, ತನಿಖೆ ಆಗಲಿ, ಎಫ್‌ಐಆರ್ ಆಗಿ 24 ಗಂಟೆ ಕಳೆದಿಲ್ಲ ಆಗಲೇ ಕೋರ್ಟ್‌ಗೆ ಬಂದಿದ್ದಾರೆ. ವಿಕ್ಟಿಮ್ ಮುಖ್ಯ ಕಾರ್ಯದರ್ಶಿ ಅವರ ಹೇಳಿಕೆ ದಾಖಲಿಸಬೇಕಿದೆ. ಮಾಧ್ಯಮಗಳ ಹೇಳಿಕೆಯನ್ನೂ ದಾಖಲಾಸಲಾಗುತ್ತೆ, ಇದೊಂದು ಏಳು ವರ್ಷಗಳವರೆಗಿನ ಸಜೆಯುಳ್ಳ ಕೇಸ್ ಆಗಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ ಇಲ್ಲಿ ರಕ್ಷಣೆ ಕೋರೋದು ಸರಿಯಿಲ್ಲ. ಐಎಎಸ್ ಅಧಿಕಾರಿಗಳು ಇವ್ರ ವಿರುದ್ಧ ಪ್ರತಿಭಟಿಸ್ತಿದ್ದಾರೆ ಅಂತ ವಾದ ಮಂಡಿಸಿದ್ರು. ರಾಜಕಾರಣಿಗಳು ಬಳಸುವ ಭಾಷೆ ಕೆಳಮಟ್ಟಕ್ಕಿಳಿದಿದೆ ಅಂತ ಅಭಿಪ್ರಾಯ ಪಟ್ಟ ನ್ಯಾಯಾಧೀಶರು, ಜುಲೈ 8ರ ವರೆಗೆ ಬಂಧಿಸದಂತೆ, ತನಿಖೆಗೆ ಸಹಕಾರ ನೀಡುವಂತೆ ಆದೇಶ ನೀಡಿದ್ರು.
ಇನ್ನೂ ರಾಜ್ಯ ರಾಜಕಾರಣದಲ್ಲಿ ಸದ್ಯ ಎಮ್‌ಎಲ್‌ಸಿ ರವಿಕುಮಾರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂಬ ಆರೋಪ ಭಾರೀ ಚರ್ಚೆಗೆ ಗುರಿಯಾಗಿದೆ.