ಬಿಗ್ ಶಾಕ್: ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ಇಲ್ಲ ಎಂದ ಆಹಾರ ಸಚಿವ!

0
Spread the love

ಬೆಂಗಳೂರು:- ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ಇಲ್ಲ ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ. ಈ ಮೂಲಕ ಹೊಸ ರೇಷನ್ ಕಾರ್ಡ್ ಪಡೆಯುವ ಆಸೆ ಇಟ್ಟುಕೊಂಡಿರುವವರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ.

Advertisement

ವಿಧಾನಸಭೆಯಲ್ಲಿ ಅಶೋಕ್ ಕುಮಾರ್ ರೈ ಮತ್ತು ವೇದವ್ಯಾಸ ಕಾಮತ್ ಪ್ರಶ್ನೆಗೆ ಉತ್ತರ ನೀಡಿದ ಮುನಿಯಪ್ಪ, ರಾಜ್ಯದಲ್ಲಿ ಕೇಂದ್ರ ನಿಗದಿ ಮಾಡಿದ್ದ ಕಾರ್ಡ್ ನಿಗದಿ ಗುರಿ ಮುಕ್ತಾಯವಾಗಿದೆ. ಹೊಸ ಕಾರ್ಡ್ ಕೊಡಲು ಅವಕಾಶ ಇಲ್ಲ. ಅನರ್ಹರ ಕಾರ್ಡ್ ರದ್ದು ಮಾಡೋವರೆಗೂ ಹೊಸ ಕಾರ್ಡ್‌ಗಳು ಕೊಡಲ್ಲ ಎಂದರು. ಹೀಗಾಗಿ ಸದ್ಯಕ್ಕೆ ಹೊಸ ಅರ್ಜಿ ಹಾಕಿರುವ ಜನರು ಬಿಪಿಎಲ್ ಕಾರ್ಡ್‌ಗಾಗಿ ಕಾಯಲೇಬೇಕು.

ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ಕೊಡಲು ಸರ್ಕಾರದಲ್ಲಿ ಅವಕಾಶವಿಲ್ಲ. ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ಅನ್ವಯ 4,01,93,000 ಫಲಾನುಭವಿಗಳಿಗೆ ಮಾತ್ರ ಪಡಿತರ ವಿತರಣೆ ಮಾಡಲು ಗುರಿ ನಿಗದಿ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ನಿಯಮ ಮೀರಿ 4,50,59,460 ಫಲಾನುಭವಿಗಳಿಗೆ ಪಡಿತರ ಕೊಡಲಾಗುತ್ತಿದೆ. ಕಾಯ್ದೆ ಪ್ರಕಾರ ನಿಗದಿ ಮಾಡಿರುವ ಫಲಾನುಭವಿಗಳಿಗೆ ಪಡಿತರ ಈಗಾಗಲೇ ಕೊಡಲಾಗುತ್ತಿದೆ. ಹೊಸ ರೇಷನ್ ಕಾರ್ಡ್ ಕೊಡಬೇಕಾದರೆ ಅನರ್ಹ ಕಾರ್ಡ್ ರದ್ದು ಮಾಡಿ ಅದೇ ಪ್ರಮಾಣದಲ್ಲಿ ಹೊಸ ಕಾರ್ಡ್ ಕೊಡಬೇಕಾಗುತ್ತದೆ. ಅನರ್ಹ ಕಾರ್ಡ್ ರದ್ದು ಮಾಡೋವರೆಗೂ ಹೊಸ ಕಾರ್ಡ್ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here