ಪ್ರಯಾಣಿಕರಿಗೆ ಬಿಗ್ ಶಾಕ್: ಇಂದಿನಿಂದ ಆಟೋ ದರ ಏರಿಕೆ!

0
Spread the love

ಬೆಂಗಳೂರು:- ಸಿಲಿಕಾನ್ ಸಿಟಿಯಲ್ಲಿ ವಾಸಿಸುವ ಜನರಿಗೆ ನಿತ್ಯ ಯಾವುದಾದರೂ ಒಂದು ಶಾಕಿಂಗ್​ ನ್ಯೂಸ್​ ಇದ್ದೇ ಇರುತ್ತದೆ. ಮಹಾನಗರದಲ್ಲಿ ಜೀವನ ನಡೆಸುತ್ತಿದ್ದರಿಂದ ಇಂತಹ ಆರ್ಥಿಕ ಹೊರೆ ಅನುಭವಿಸಲೇಬೇಕು. ಇದೀಗ ನಗರದ ಆಟೋ ಮೀಟರ್ ದರ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

Advertisement

ಈ ಮೂಲಕ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಸಿಕ್ಕಂತಾಗಿದೆ. ಬೆಂಗಳೂರಿಗರ ಜೇಬಿಗೆ ಕತ್ತರಿ ಬೀಳುತ್ತಿದೆ. ಒಂದೆಡೆ ಸರ್ಕಾರ ಆಟೋ ದರ ಏರಿಕೆ ಮಾಡಿದ್ರೆ, ಮತ್ತೊಂದೆಡೆ ಸುಲಿಗೆ ಮಾಡೋ ಆಟೋ ಚಾಲಕರ ಆಪರೇಷನ್‌ಗೆ ಟ್ರಾಫಿಕ್ ಪೋಲಿಸರು ಮುಂದಾಗಿದ್ದಾರೆ.

ಕಳೆದ ತಿಂಗಳ 14ನೇ ತಾರೀಖಿನಂದು ಬೆಂಗಳೂರು ಆಟೋ ದರವನ್ನು ಹೆಚ್ಚಿಸಿ ಬೆಂಗಳೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ರು. ಈ ಆದೇಶ ಇಂದಿನಿಂದ ಜಾರಿಗೆ ಬರ್ತಿದ್ದು, ಬೆಂಗಳೂರಿಗರಿಗೆ ದುಬಾರಿ ದುನಿಯಾದಲ್ಲಿ ಆಟೋ ಪ್ರಯಾಣ ದರವೂ ಹೊರೆಯಾಗಲಿದೆ.

2 ಕಿಮೀಗೆ ಕನಿಷ್ಠ ಪ್ರಯಾಣ ದರ 30 ರಿಂದ 36ಕ್ಕೆ ಏರಿಕೆ ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಡಿಸಿ ಜಗದೀಶ್ ಆದೇಶ ಹೊರಡಿಸಿದ್ದಾರೆ. ಇದು ರಾಜಧಾನಿ ಜನರ ಜೇಬಿಗೆ ಕತ್ತರಿ ಹಾಕಲಿದೆ.

ಆಟೋ ಪ್ರಯಾಣ ದುಬಾರಿ?
– ಮೊದಲ 2 ಕಿ.ಮೀಗೆ ಕನಿಷ್ಠ 36 ರೂ.
– ನಂತರ ಪ್ರತಿ ಕಿ.ಮೀಗೆ 18 ರೂ.
– ಮೊದಲ ಐದು ನಿಮಿಷ ಕಾಯುವಿಕೆ ಉಚಿತ
– ಪ್ರತಿ 15 ನಿಮಿಷ ಕಾಯುವಿಕೆ ದರ 10 ರೂ.
– 20 ಕೆಜಿ ಲಗೇಜ್ ಉಚಿತ
– 20 ಕೆಜಿಗಿಂತ ಹೆಚ್ಚಿದ್ರೆ 10 ರೂ. ಲಗೇಜ್ ಶುಲ್ಕ
– ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ಒಂದೂವರೆ ಪಟ್ಟು ದರ
– ಹೊಸ ದರ ಪಟ್ಟಿ ಆಟೋದ ಮೇಲೆ ಕಡ್ಡಾಯ ಹಾಕಬೇಕು
– ಪರಿಷ್ಕೃತ ದರದ ಹೊಸ ಮೀಟರ್ ಅ.31ರ ಒಳಗೆ ಹಾಕಿಸಬೇಕು.

ಈ ದರ ಏರಿಕೆಯ ನಂತರವೂ ಹೆಚ್ಚು ಹಣ ಪಡೆದ್ರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಮತ್ತೊಂದೆಡೆ ಆಟೋರಿಕ್ಷಾ ವಾಹನಗಳ ವಿರುದ್ದ ವಿಶೇಷ ಕಾರ್ಯಾಚರಣೆ ಸಂಚಾರಿ ಪೋಲಿಸರು ಕೈಗೆತ್ತಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here