ಗ್ರಾಹಕರಿಗೆ ಬಿಗ್ ಶಾಕ್: ಬೆಂಗಳೂರಲ್ಲಿ ಆಟೋ ಪ್ರಯಾಣ ದರ ಏರಿಕೆ..!

0
Spread the love

ಬೆಂಗಳೂರು:- ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಓಡಾಟಕ್ಕಾಗಿ ಆಟೋ, ಟ್ಯಾಕ್ಸಿಯಂತಹ ಖಾಸಗಿ ವಾಹನಗಳನ್ನು ಅವಲಂಬಿಸುವವರ ಸಂಖ್ಯೆಯೇ ಹೆಚ್ಚು. ನಗರದಲ್ಲಿ ಬೈಕ್ ಟ್ಯಾಕ್ಸಿ ನಿಷೇಧ ಬೆನ್ನಲ್ಲೇ ಬೆಂಗಳೂರಲ್ಲಿ ಆಟೋ ಪ್ರಯಾಣ ದರ ಏರಿಕೆ ಆಗಿದೆ. ಓಲಾ ಸೇರಿದಂತೆ ಕೆಲ ಅಗ್ರಿಗೇಟರ್ ಕಂಪನಿಗಳು ಬೇಕಾಬಿಟ್ಟಿ ವಸೂಲಿ ಮಾಡ್ತಿರುವ ಆರೋಪ ಕೇಳಿ ಬಂದಿದೆ.

Advertisement

ರಾಜ್ಯಾದ್ಯಂತ ಬೈಕ್ ಟ್ಯಾಕ್ಸಿ ನಿಷೇಧದ ಬೆನ್ನಲ್ಲೇ ಇದೀಗ ಅಗ್ರಿಗೇಟರ್‌ ಕಂಪನಿಗಳ ಆಟೋ ಪ್ರಯಾಣದ ದರ ಏರಿಕೆಯಾಗಿದೆ. ಬೈಕ್ ಟ್ಯಾಕ್ಸಿಗೆ ಬ್ರೇಕ್ ಹಾಕಿರುವುದನ್ನೇ ಬಂಡವಾಳ ಮಾಡಿಕೊಂಡು ಓಲಾ ಸೇರಿದಂತೆ ಕೆಲವು ಅಗ್ರಿಗೇಟ್ ಆಟೋ ಕಂಪನಿಗಳು ಇದೀಗ ಅಟೋ ದರವನ್ನು ಬೇಕಾಬಿಟ್ಟಿಯಾಗಿ ಏರಿಸಿವೆ ಎಂಬ ಆರೋಪ ಕೇಳಿಬಂದಿದೆ.

ಫಾರ್​ ಎಕ್ಸಾಂಪಲ್​ ಟೌನ್ ಹಾಲ್ ನಿಂದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕಿರುವ ಅಂತರ 2.02ಕಿಲೋ ಮೀಟರ್​ ಇದೆ. ನಿಯಮದ ಪ್ರಕಾರ 30-₹35 ರೂಪಾಯಿ ತಗೋಬೇಕು. ಆದ್ರೆ ಓಲಾದಲ್ಲಿ 98 ರೂಪಾಯಿ ತಗೊಂಡಿದೆ. ಇದೇ ರೀತಿ ಹಲವೆಡೆ ಬೇಕಾಬಿಟ್ಟಿ ವಸೂಲಿ ಮಾಡ್ತಿರೊದಾಗಿ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಮೀಟರ್ ಪ್ರಕಾರ ಹಣ ತೆಗೆದುಕೊಳ್ಳಿ. ಹೀಗೆ ಹಗಲು ದರೋಡೆ ಮಾಡುತ್ತಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here