ಗ್ರಾಹಕರಿಗೆ ಬಿಗ್ ಶಾಕ್: ಗಗನಕ್ಕೇರಿದ ತರಕಾರಿಗಳ ಬೆಲೆ – ಯಾವುದಕ್ಕೆ ಎಷ್ಟು? ಇಲ್ಲಿದೆ ಡೀಟೇಲ್ಸ್!

0
Spread the love

ಬೆಂಗಳೂರು:- ಚಂಡಮಾರುತದ ಎಫೆಕ್ಟ್ ನಿಂದಾಗಿ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

Advertisement

ರಾಜ್ಯದಲ್ಲಿ ಚಳಿ ಅಬ್ಬರಿಸುತ್ತಿದ್ದು, ತರಕಾರಿಗಳ ಮೇಲೆಯೂ ಚಂಡಮಾರುತದ ಎಫೆಕ್ಟ್ ಬೀರಿದೆ. ಇದರಿಂದ ಇಳುವರಿ ಕಡಿಮೆಯಾಗಿದ್ದು, ತರಕಾರಿಗಳ ಬೆಲೆ ಗಗನಕ್ಕೇರಿದೆ. ಕೆಲ ತರಕಾರಿಗಳ ಬೆಲೆ ಶತಕದ ಗಡಿ ದಾಟಿದ್ರೇ, ನುಗ್ಗೆಕಾಯಿ ಬೆಲೆ ಐದನೂರರ ಗಡಿ ದಾಟಿದೆ.

ಬಹುತೇಕ ತರಕಾರಿಗಳ ಬೆಲೆ ಏರಿಕೆಯಾಗಿದ್ದು, ನುಗ್ಗೇಕಾಯಿ ಹಾಪ್ ಕಾಮ್ಸ್ನಲ್ಲಿ ಒಂದು ಕೆಜಿ 510 ರೂ.ಗೆ ಮಾರಾಟವಾಗ್ತಿದೆ. ಮಾರ್ಕೆಟ್‌ಗಳಲ್ಲಿ ಒಂದು ನುಗ್ಗೇಕಾಯಿ 50 ರೂ., ಜೋಡಿ ನುಗ್ಗೇಕಾಯಿ 100 ರೂ. ಆಗಿದೆ. ಇದರಿಂದ ಸಿಲಿಕಾನ್ ಸಿಟಿ ಜನರು ನುಗ್ಗೇಕಾಯಿ ಸಹವಾಸ ಬೇಡ ಅಂತಿದ್ದಾರೆ. ಈಗಾಗಲೇ ಟೊಮೆಟೋ ಬೆಲೆ ಅರ್ಧಶತಕ ಬಾರಿಸಿದ್ದು, ಉಳಿದ ತರಕಾರಿಗಳು ನಿಧಾನವಾಗಿ ಶತಕಬಾರಿಸುತ್ತಿದೆ.

ಯಾವುದರ ಬೆಲೆ ಎಷ್ಟು?
ನುಗ್ಗೇಕಾಯಿ- ಕೆ.ಜಿಗೆ 510 ರೂ.
ಅವರೇಕಾಯಿ- ಕೆ.ಜಿಗೆ 85 ರೂ.
ಹುರುಳಿಕಾಯಿ – ಕೆ.ಜಿಗೆ 62 ರೂ.
ಊಟಿ ಕ್ಯಾರೆಟ್ – ಕೆ.ಜಿಗೆ 88 ರೂ.
ಬಿಟ್‌ರೂಟ್ – ಕೆ.ಜಿಗೆ 55 ರೂ.
ಹಣ್ಣು ಹುರಳಿಕಾಯಿ – ಕೆ.ಜಿಗೆ 110 ರೂ.
ಹಸಿ ಮೆಣಸಿನಕಾಯಿ– ಕೆ.ಜಿಗೆ 70 ರೂ.
ಬೆಂಡೆಕಾಯಿ – ಕೆ.ಜಿಗೆ 84 ರೂ.
ಟೊಮ್ಯಾಟೋ – ಕೆ.ಜಿಗೆ 70 ರೂ.

ಇನ್ನೂ ಟೊಮ್ಯಾಟೋ ಬೆಲೆಯಂತು ದಿನೇ ದಿನೇ ಏರಿಕೆಯಾಗುತ್ತಿದೆ. ಕೆ.ಜಿ ಟೊಮ್ಯಾಟೋಗೆ ಮಾರುಕಟ್ಟೆಯಲ್ಲಿ 70 ರೂ.ಯಿಂದ 90 ರೂ. ಮಾರಾಟವಾಗ್ತಿದೆ. ಇದರಿಂದ ರೈತರು ಸಂತಸಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here