HomeSports Newsಕ್ರಿಕೆಟ್ ಆಸ್ಟ್ರೇಲಿಯಾಗೆ ಬಿಗ್ ಶಾಕ್: ಟಿ-20ಗೆ ದಿಢೀರ್ ವಿದಾಯ ಹೇಳಿದ ಮಿಚೆಲ್ ಸ್ಟಾರ್ಕ್!

ಕ್ರಿಕೆಟ್ ಆಸ್ಟ್ರೇಲಿಯಾಗೆ ಬಿಗ್ ಶಾಕ್: ಟಿ-20ಗೆ ದಿಢೀರ್ ವಿದಾಯ ಹೇಳಿದ ಮಿಚೆಲ್ ಸ್ಟಾರ್ಕ್!

For Dai;y Updates Join Our whatsapp Group

Spread the love

ಆಸ್ಟ್ರೇಲಿಯಾ ತಂಡದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್ ಮತ್ತು ಮುಂದಿನ ಏಕದಿನ ವಿಶ್ವಕಪ್ ಗೆ ಗಮನ ಹರಿಸುವ ಸಲುವಾಗಿ ಈ ನಿರ್ಧಾರ ಎಂದು 35ರ ಹರೆಯದ ಎಡಗೈ ವೇಗಿ ತಿಳಿಸಿದ್ದಾರೆ. ಆದರೆ ಮಹತ್ವದ ಟೂರ್ನಿಗೆ ತಂಡ ಕಟ್ಟಲು ಪ್ರಯತ್ನಿಸುತ್ತಿರುವ ಕ್ರಿಕೆಟ್ ಆಸ್ಟ್ರೇಲಿಯಾಗೆ ಅವರ ಈ ದಿಢೀರ್ ನಿರ್ಧಾರ ಅಚ್ಚರಿ ಉಂಟು ಮಾಡಿದೆ.

ಈ ಬಗ್ಗೆ ಮಾತನಾಡಿರುವ ಮಿಚೆಲ್ ಸ್ಟಾರ್ಕ್, “ಟೆಸ್ಟ್ ಕ್ರಿಕೆಟ್ ನನ್ನ ಮೊದಲ ಆದ್ಯತೆಯಾಗಿದೆ. ನಾನು ಆಸ್ಟ್ರೇಲಿಯಾ ಪರ ಆಡಿದ ಪ್ರತಿಯೊಂದು ಟಿ20 ಮಾದರಿಯನ್ನು ಇಷ್ಟಪಟ್ಟಿದ್ದೇನೆ. ಅದರಲ್ಲೂ 2021ರ ವಿಶ್ವಕಪ್ ಗೆದ್ದಿದ್ದು ನನಗೆ ತುಂಬಾ ಖುಷಿ ನೀಡಿದೆ. ಆ ತಂಡ ಮತ್ತು ಆಟದ ಮೋಜು ಅದ್ಭುತವಾಗಿತ್ತು.” ಎಂದು ತಿಳಿಸಿದ್ದಾರೆ. ಯುವ ಬೌಲಿಂಗ್ ಪಡೆಗೆ ಟಿ20 ವಿಶ್ವಕಪ್‌ಗೆ ತಯಾರಿ ನಡೆಸಲು ಬೌಲಿಂಗ್ ಬಳಗಕ್ಕೆ ಸಾಕಷ್ಟು ಸಮಯ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!