ಕಮಲ್ ಹಾಸನ್‌ಗೆ ಬಿಗ್ ಶಾಕ್‌: ಕರ್ನಾಟಕದಲ್ಲಿ ಥಗ್‌ ಲೈಫ್ ಗಿಲ್ಲ ಬಿಡುಗಡೆ ಭಾಗ್ಯ

0
Spread the love

ಬೆಂಗಳೂರು: ಕನ್ನಡದ ಬಗ್ಗೆ ಹೇಳಿಕೆ ನೀಡಿದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ ಕ್ಷಮೆ ಕೇಳಲು ನಿರಾಕರಿಸಿರುವ ನಟ ಕಮಲ್‌ ಹಾಸನ್‌ಗೆ ಹೈಕೋರ್ಟ್‌ ಬಿಗ್ ಶಾಕ್ ನೀಡಿದೆ. ಥಗ್ ಲೈಫ್ ಸಿನಿಮಾ ರಿಲೀಸ್‌ಗೆ ಭದ್ರತೆ ಕೋರಿ ಕಮಲ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಲಾಗಿದೆ. ಹೀಗಾಗಿ ಸದ್ಯಕ್ಕಂತು ಥಗ್‌ ಲೈಫ್‌ ಗೆ ಕರ್ನಾಟಕದಲ್ಲಿ ಬಿಡುಗಡೆ ಇಲ್ಲವಾಗಿದೆ.

Advertisement

ಕಮಲ್ ಹಾಸನ್ ನಟನೆಯ ಥಗ್‌ ಲೈಫ್‌ ಇದೇ ಐದನೇ ತಾರೀಖು ರಿಲೀಸ್‌ ಆಗಲಿದೆ. ಆದರೆ ಕಮಲ್‌ ನೀಡಿರುವ ಹೇಳೀಕೆಯಿಂದ ಕರ್ನಾಟಕದಲ್ಲಿ ಥಗ್‌ ಲೈಫ್‌ ಸಿನಿಮಾ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹಲವು ಸಂಘಟನೆಗಳು ಪಟ್ಟು ಹಿಡಿದಿವೆ. ಹೀಗಾಗಿ ಕಮಲ್‌ ಕರ್ನಾಟಕದಲ್ಲಿ ಥಗ್‌ ಲೈಫ್‌ ಬಿಡುಗಡೆಗೆ ಅವಕಾಶ ನೀಡಬೇಕು. ಜೊತೆಗೆ ಸಿನಿಮಾ ರಿಲೀಸ್‌ಗೆ ಭದ್ರತೆ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು.

ಕಮಲ್‌ ಹಾಸನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರ ಪೀಠದಲ್ಲಿ ನಡೆಯಿತು. ಈ ವೇಳೆ ಕಮಲ್ ಹಾಸನ್ ಪರ ವಕೀಲ ಧ್ಯಾನ್ ಚಿನ್ನಪ್ಪ ಅವರು ಫಿಲ್ಮ್‌ ಚೇಂಬರ್ ಜೊತೆ ಮಾತುಕತೆ ನಡೆಸಲು ಒಂದು ವಾರಗಳ ಸಮಯ ಕೋರಿದರು.

ಅರ್ಜಿದಾರರ ಪರ ವಕೀಲರೇ 1 ವಾರಗಳ ಸಮಯ ಕೇಳಿದರಿಂದ ಈ ಸಮಸ್ಯೆ ಬಗೆಹರಿಯುವವರೆಗೂ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಪ್ರದರ್ಶನ ಇಲ್ಲವಾಗಿದೆ. ಸದ್ಯ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜೂನ್ 10ಕ್ಕೆ ಮುಂದೂಡಿಕೆ.


Spread the love

LEAVE A REPLY

Please enter your comment!
Please enter your name here