ಕಿಂಗ್ ಕೊಹ್ಲಿಗೆ ಬಿಗ್ ಶಾಕ್: ಕಾಲ್ತುಳಿತ ಪ್ರಕರಣದಲ್ಲಿ ದೂರು ದಾಖಲು!

0
Spread the love

ಬೆಂಗಳೂರು:- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಾಲ್ತುಳಿತಕ್ಕೆ ಸುಮಾರು 11 ಮಂದಿ ಉಸಿರು ಚಲ್ಲಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಕೊಹ್ಲಿ ವಿರುದ್ಧ ಇದೀಗ ದೂರು ದಾಖಲಾಗಿದೆ. ಕೊಹ್ಲಿ ವಿರುದ್ಧ ನೈಜ್ಯ ಹೋರಾಟಗಾರರ ಸಂಘ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರಿನಲ್ಲಿ, ಈ ನೂಕು ನುಗ್ಗಲಿಗೆ ಕೊಹ್ಲಿ ಸಹ ಕಾರಣ ಎಂದು ಆರೋಪಿಸಲಾಗಿದೆ. ಅಲ್ಲದೇ ದುರಂತ ನಡೆದ ಕುಟುಂಬವನ್ನು ಕೊಹ್ಲಿ ಭೇಟಿ ಮಾಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Advertisement

ಬೆಂಗಳೂರಿನಲ್ಲಿ ಸೆಲಬ್ರೇಷನ್ ತರಾತುರಿಯಲ್ಲಿ ನಡೆಯಿತು. ಇದಕ್ಕೆ ಕೊಹ್ಲಿ ಒತ್ತಡವೇ ಕಾರಣ. ವಿದೇಶ ಪ್ರವಾಸ ಇರೋದ್ರಿಂದ ಅವರು ಸೆಲೆಬ್ರೇಷನ್ ಬೇಗ ನಡೆಸುವಂತೆ ಒತ್ತಡ ಹೇರಿರುವ ಸಾಧ್ಯತೆ ಇದೆ. ಇಲ್ಲಿ ಮುಗಿಯುತ್ತಿದ್ದಂತೆ ಕೊಹ್ಲಿ ಲಂಡನ್‌ಗೆ ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ಅಲ್ಲು ಅರ್ಜುನ್ ಸಿನಿಮಾ ಸಂದರ್ಭದಲ್ಲಿ ದುರಂತಕ್ಕೆ ನಟ ಕಾರಣ ಎಂದು ಬಂಧಿಸಲಾಗಿತ್ತು. ಈಗ ವಿರಾಟ್ ನೋಡೋದಕ್ಕೆ ಇಷ್ಟೊಂದು ಜನ ಪ್ರಮುಖವಾಗಿ ಸೇರಿದ್ದರು. ಹೀಗಾಗಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.


Spread the love

LEAVE A REPLY

Please enter your comment!
Please enter your name here