ಮಂಗಳೂರು: ಮಂಗಳೂರು–ಕಾಸರಗೋಡು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಬಿಗ್ ಶಾಕ್ ನೀಡಿದೆ.
ಕುಂಬಳ ಟೋಲ್ ಗೇಟ್ನಲ್ಲಿ ಅಧಿಕೃತ ಸಂಗ್ರಹ ಆರಂಭಕ್ಕೂ ಮುನ್ನವೇ ಟೋಲ್ ಮೊತ್ತವನ್ನು ಸೇರಿಸಿ ಬಸ್ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಜ.20ರಿಂದ ಪರಿಷ್ಕೃತ ದರ ಜಾರಿಗೆ ಬಂದಿದ್ದು, ಕುಂಬಳ–ಮಂಗಳೂರು ಪ್ರಯಾಣ ದರ 67ರಿಂದ 75 ರೂ.ಗೆ ಏರಿಕೆಯಾಗಿದೆ.
ರಾಜಹಂಸ ಬಸ್ಗಳ ದರವೂ 80ರಿಂದ 90 ರೂ.ಗೆ ಹೆಚ್ಚಿದೆ. ಪ್ರತಿದಿನ ಸುಮಾರು 35 ಕೆಎಸ್ಆರ್ಟಿಸಿ ಬಸ್ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಟೋಲ್ ಪಾವತಿಗೆ ದಿನಕ್ಕೆ ಸುಮಾರು 48 ಸಾವಿರ ರೂ. ವ್ಯಯವಾಗುತ್ತಿದೆ. ಹೆದ್ದಾರಿ ಬಳಸದಿದ್ದರೂ ಟೋಲ್ ಪಾವತಿಸಬೇಕಾದ ಅನಿವಾರ್ಯತೆಯಿಂದ ದರ ಏರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೋಲ್ ವಿನಾಯಿತಿ ಕೋರಿ ಮಂಗಳೂರು ವಿಭಾಗದ ಅಧಿಕಾರಿಗಳು ಕಾಸರಗೋಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.



