SSLC ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಇನ್ಮುಂದೆ ಮುಖ್ಯ ಪರೀಕ್ಷೆಯಂತೆ ಮಧ್ಯವಾರ್ಷಿಕ ಪರೀಕ್ಷೆ!

0
Spread the love

ಬೆಂಗಳೂರು:- SSLC ವಿದ್ಯಾರ್ಥಿಗಳಿಗೆ ಶಾಕ್ ಎದುರಾಗಿದ್ದು, ಮುಖ್ಯ ಪರೀಕ್ಷೆಯಂತೆ ಮಧ್ಯವಾರ್ಷಿಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

Advertisement

ಪ್ರಸಕ್ತ ಸಾಲಿನಲ್ಲಿ ಎಸ್​ಎಸ್​ಎಲ್​ಸಿ ಮಧ್ಯವಾರ್ಷಿಕ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳನ್ನು ರೂಪಿಸಿ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ. ಈ ಹಿಂದೆ ಪೂರ್ವ ಸಿದ್ಧತಾ ಮತ್ತ ವಾರ್ಷಿಕ ಪರೀಕ್ಷೆಗಳಿಗೆ ಮಾತ್ರ ಪ್ರಶ್ನಿ ಪತ್ರಿಕೆ ರೂಪಿಸಿ ಕೊಡಲಾಗುತ್ತಿತ್ತು. ಆದ್ರೆ, ಈ ವರ್ಷದಿಂದ ಮಧ್ಯವಾರ್ಷಿಕ ಪರೀಕ್ಷೆಗೂ ಪ್ರಶ್ನಿ ಪತ್ರಿಕೆ ರೂಪಿಸಿ ಆನ್​ಲೈನ್​ ಮೂಲಕ ರವಾನಿಸುವ ಮಹತ್ವದ ನಿರ್ಧಾರ ಮಾಡಿದೆ.

ಮಧ್ಯವಾರ್ಷಿಕ ಪರೀಕ್ಷೆಗಳಿಗೆ ಕೆಲವೇ ದಿನಗಳು ಬಾಕಿ ಇದೆ. ಈ ಸಮಯದಲ್ಲಿ ಇಲಾಖೆಯ ಈ ನಿರ್ಧಾರಕ್ಕೆ ಮುಂದಾಗಿರುವುದು ಹಲವರ ವಿರೋಧಕ್ಕೆ ಕಾರಣವಾಗಿದೆ.

ಈ ವರ್ಷ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ sslc ಮುಖ್ಯ ಪರೀಕ್ಷೆಯ ಮಾದರಿಯಲ್ಲಿಯೇ ಮಂಡಳಿ ಹಂತದಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸಿ ಶಾಲೆಗಳಿಗೆ ಲಾಗಿನ್ ನೀಡಲು ಮುಂದಾಗಿದೆ. ಆದ್ರೆ, ಪರೀಕ್ಷೆ ನಡೆಸಲು ಪ್ರಶ್ನೆ ಪತ್ರಿಕೆ ಮುದ್ರಣಕ್ಕೆ ಯಾವುದೇ ಅನುದಾನ ಶಾಲೆಗಳಿಗೆ ನೀಡಿಲ್ಲ. ಶಿಕ್ಷಕರು ಹಾಗೂ ಶಾಲೆಗಳ
ಹೆಗಲಿಗೆ ಈ ಖರ್ಚು ಹಾಕಿ ಇಲಾಖೆ ಸುಮ್ಮನಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ದಾನಿಗಳ ಮೊರೆ ಹೋಗಬೇಕಾದ ಸ್ಥಿತಿ ಸರ್ಕಾರಿ ಶಾಲಾ ಶಿಕ್ಷಕರಿಗೆ ಎದುರಾಗಿದೆ.

ಶಿಕ್ಷಕರ ಪರೀಕ್ಷೆಗೂ ಮೊದಲು ಇದನ್ನ ಪ್ರಿಂಟ್ ಮಾಡಿಸಿ ವಿದ್ಯಾರ್ಥಿಗಳಿಗೆ ನೀಡಬೇಕಾಗಿದೆ. ಸದ್ಯ ಇದಕ್ಕೆ ಯಾವುದೇ ಅನುದಾನ ನೀಡಿಲ್ಲ. ಒಬ್ಬ ವಿದ್ಯಾರ್ಥಿಗೆ 6 ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಸಿದ್ಧಪಡಿಸಿ ನೀಡಲು ಕನಿಷ್ಠ 50 ರಿಂದ 60 ರೂಪಾಯಿ ಖರ್ಚಾಗುತ್ತದೆ. ಆದ್ರೆ ಇಲಾಖೆ ಇದಕ್ಕೆ ಅನುದಾನ ನೀಡದೇ ಏಕಾಏಕಿ ಈ ರೀತಿ ನಿರ್ಧಾರಕ್ಕೆ ಮುಂದಾಗಿರುವುದಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾಗಿವೆ.


Spread the love

LEAVE A REPLY

Please enter your comment!
Please enter your name here