HomeSports Newsಟೀಮ್ ಇಂಡಿಯಾ ಕ್ಯಾಪ್ಟನ್ ಸೂರ್ಯನಿಗೆ ಬಿಗ್ ಶಾಕ್: ಕಠಿಣ ಎಚ್ಚರಿಕೆ ಜೊತೆ ಬಿತ್ತು ಭಾರೀ ದಂಡ!

ಟೀಮ್ ಇಂಡಿಯಾ ಕ್ಯಾಪ್ಟನ್ ಸೂರ್ಯನಿಗೆ ಬಿಗ್ ಶಾಕ್: ಕಠಿಣ ಎಚ್ಚರಿಕೆ ಜೊತೆ ಬಿತ್ತು ಭಾರೀ ದಂಡ!

For Dai;y Updates Join Our whatsapp Group

Spread the love

ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಗ್ ಶಾಕ್ ನೀಡಿದೆ.

ಕಳೆದ ಸೆಪ್ಟೆಂಬರ್ 14ರಂದು 2025ರ ಏಷ್ಯಾ ಕಪ್ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಪಂದ್ಯ ನಂತರದ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಸೂರ್ಯಕುಮಾರ್ ಯಾದವ್ ತಂಡದ ಗೆಲುವನ್ನು “ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತ ಕುಟುಂಬಗಳಿಗೆ ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸುತ್ತೇನೆ” ಎಂದು ಹೇಳಿದರು. ಅವರು “ಆಪರೇಷನ್ ಸಿಂಧೂರ್” ಎಂಬ ಪದವನ್ನು ಬಳಸಿದ್ದರು.

ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಈ ಹೇಳಿಕೆಯನ್ನು “ರಾಜಕೀಯ ಸಂಬಂಧಿತ” ಎಂದು ಆರೋಪಿಸಿ, ಐಸಿಸಿಗೆ ಅಧಿಕೃತ ದೂರು ದಾಖಲಿಸಿತು. ಪಿಸಿಸಿಬಿಯ ಹಿರಿಯ ಅಧಿಕಾರಿಗಳು ಕಳೆದ ವಾರ ಲಾಹೋರ್ ಸುದ್ದಿಗೋಷ್ಠಿಯಲ್ಲಿ ಈ ದೂರನ್ನು ಪುನರಾವರ್ತಿಸಿದರು. “ಆಪರೇಷನ್ ಸಿಂಧೂರ್” ಎಂಬ ಪದ ಇದು ಭಾರತ-ಪಾಕ್ ಸೈನ್ಯ ಸಂಘರ್ಷದ ಸಂದರ್ಭದಲ್ಲಿ ಬಳಸಲ್ಪಟ್ಟಿದ್ದು, ಕ್ರಿಕೆಟ್ ಮೈದಾನಕ್ಕೆ ರಾಜಕೀಯವನ್ನು ತರಲು ಪ್ರಯತ್ನ ಮಾಡಿದ್ದಾರೆಂದು ಸೂರ್ಯಕುಮಾರ್ ವಿರುದ್ಧ ದೂರಿದ್ದರು.

ವಿಚಾರಣೆ ವೇಳೆ ಸೂರ್ಯಕುಮಾರ್‌ ತಾವೂ ತಪ್ಪಿತಸ್ಥರಲ್ಲ ಎಂದು ವಾದಿಸಿದರು. ಅವರ ಹೇಳಿಕೆಗಳು ಒಗ್ಗಟ್ಟು ಮತ್ತು ಸಹಾನುಭೂತಿಯ ಸಂದೇಶವಾಗಿದ್ದವು, ರಾಜಕೀಯವಲ್ಲ ಎಂದು ಹೇಳಿದ್ದರು. ಆದರೆ ಐಸಿಸಿ ಇದನ್ನು ಲೆವೆಲ್ 1 ಉಲ್ಲಂಘನೆ ಎಂದು ಕರೆದು, ಸೂರ್ಯಕುಮಾರ್ ಅವರಿಗೆ ಔಪಚಾರಿಕ ಎಚ್ಚರಿಕೆ ನೀಡಿ, ಪಂದ್ಯದ ಸಂಭಾವನೆಯ ಶೇ. 30 ರಷ್ಟು ದಂಡವಾಗಿ ವಿಧಿಸಲಾಗಿದೆ. ಜೊತೆಗೆ ಭವಿಷ್ಯದಲ್ಲಿ ರಾಜಕೀಯ ಸಂಬಂಧಿತ ಹೇಳಿಕೆಗಳನ್ನು ತಪ್ಪಿಸಿ ಎಂದು ಸೂಚಿಸಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!