ಆಹಾರ ಇಲಾಖೆಯಿಂದ ಬಿಗ್ ಶಾಕ್:‌ ಪನ್ನೀರ್ʼನಲ್ಲಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆ..!

0
Spread the love

ಬೆಂಗಳೂರು: ಪನ್ನೀರ್​ನಿಂದ ಮಾಡಿದ ಬಗೆಬಗೆಯ ಖಾದ್ಯಗಳನ್ನು ಮನೆಯಲ್ಲೇ ತಯಾರಿಸಿ ಸವಿಯುವ ಜನರು ಅನೇಕರು ನಮ್ಮ ನಡುವೆಯೇ ಇದ್ದಾರೆ. ಪನೀರ್​ ಟೇಸ್ಟಿ ಮಾತ್ರವಲ್ಲ, ಇದರಲ್ಲಿ ಆರೋಗ್ಯ ಪ್ರಯೋಜನಗಳು ಸಮೃದ್ಧವಾಗಿದೆ. ಆದರೆ, ಇದೀಗ ಪನ್ನೀರ್ ಸೇರಿ ಇತರೆ ಆಹಾರ ಉತ್ಪನ್ನಗಳ ಸ್ಯಾಂಪಲ್ ಪಡೆದು ಟೆಸ್ಟ್​ಗೆ ಒಳಪಡಿಸಲಾಗಿತ್ತು.

Advertisement

ಇದೀಗ ಅದರ ವರದಿ ಬಂದಿದ್ದು, ಪನ್ನೀರ್​ನಲ್ಲಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆಯಾಗಿರುವುದು ದೃಢವಾಗಿದೆ. ಆ ಮೂಲಕ ಪನ್ನೀರ್​​​​​ ಪ್ರಿಯರಿಗೆ ಆಹಾರ ಇಲಾಖೆ ಶಾಕ್​ ನೀಡಿದೆ. ಉಳಿದ ಸ್ಯಾಂಪಲ್​​ಗಳ ವರದಿಗಾಗಿ ಆಹಾರ ಇಲಾಖೆ ಕಾಯುತ್ತಿದೆ.

ಕಲಬೆರಕೆ ಹಿನ್ನೆಲೆ ಕಳೆದ ಹಲವು ದಿನಗಳ ಹಿಂದೆ ಬೆಂಗಳೂರು ಸೇರಿ ಹಲವೆಡೆ ಆಹಾರ ಇಲಾಖೆ ಪನ್ನೀರ್​ ಸ್ಯಾಂಪಲ್ ಸಂಗ್ರಹಿಸಿತ್ತು. ಆಹಾರ ಗುಣಮಟ್ಟ ಇಲಾಖೆಯಿಂದ ಪನೀರ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಇದೀಗ ಲ್ಯಾಬ್ ರಿಪೋರ್ಟ್ ಆಹಾರ ಇಲಾಖೆ ಕೈಸೇರಿದೆ. ವರದಿಯಲ್ಲಿ ಅಸುರಕ್ಷಿತ ಅಂಶ ಇರೋದು ಪತ್ತೆ ಆಗಿದೆ.


Spread the love

LEAVE A REPLY

Please enter your comment!
Please enter your name here