ರಾಕಿಂಗ್ ಸ್ಟಾರ್ ಯಶ್ ಇದೇ ಜ.8ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಈ ದಿನ ‘ಟಾಕ್ಸಿಕ್’ ಚಿತ್ರದ ಬಗ್ಗೆ ಏನಾದರೂ ಅಪ್‌ಡೇಟ್ ಸಿಗಬಹುದು ಎಂದು ನಿರೀಕ್ಷಿಸಿದವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸದ್ಯ ಚಿತ್ರತಂಡದ ಕಡೆಯಿಂದ ಬಿಗ್ ನ್ಯೂಸ್‌ವೊಂದು ಸಿಕ್ಕಿದ್ದು ಈ ಬಗ್ಗೆ ಸಿನಿಮಾದ ನಿರ್ಮಾಣ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ.
ಯಶ್ ಬರ್ತ್‌ಡೇಯಂದು (ಜ.8) ಬೆಳಗ್ಗೆ 10:25ಕ್ಕೆ ‘ಟಾಕ್ಸಿಕ್’ ಬಗ್ಗೆ ಅಪ್‌ಡೇಟ್ ಸಿಗಲಿದೆ ಎಂದು ಕೆವಿಎನ್ ನಿರ್ಮಾಣ ಸಂಸ್ಥೆ ತಿಳಿಸಿದೆ. ಯಶ್ ಕೂಡ ಇದೇ ಮಾಹಿತಿಯನ್ನು ಶೇರ್ ಮಾಡಿದ್ದಾರೆ.
ಸದ್ಯ ರಿಲೀಸ್ ಆಗಿರೋ ಪೋಸ್ಟರ್‌ನಲ್ಲಿ ಯಶ್ ಅವರು ಹಳೆಯ ಕಾಲದ ಕಾರಿನ ಮೇಲೆ ನಿಂತಿದ್ದಾರೆ. ಅವರ ಬಾಯಲ್ಲಿ ಸಿಗರೇಟ್ ಇದೆ. ತಲೆಗೆ ಹ್ಯಾಟ್ ಧರಿಸಿದ್ದಾರೆ. ಇದು ಅವರ ಗೆಟಪ್ ಎಂದು ಹೇಳಲಾಗುತ್ತಿದೆ. ಈ ಮೊದಲು ಟೈಟಲ್ ಟೀಸರ್ ಅನೌನ್ಸ್ ಮಾಡುವಾಗಲೂ ಯಶ್ ಅವರು ತಲೆಗೆ ಹ್ಯಾಟ್ ಧರಿಸಿಯೇ ಕಾಣಿಸಿಕೊಂಡಿದ್ದರು. ಇದೇ ಲುಕ್ ಸಿನಿಮಾದಲ್ಲೂ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.