ರೈತ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! ಕಾನೂನು ಕಾಯಬೇಕಾದವನಿಂದಲೇ ಕೊಲೆ

0
Spread the love

ಬಾಗಲಕೋಟೆ: ಟಾಟಾ‌ ಸಫಾರಿ  ಬೈಕ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತದಲ್ಲಿ ರೈತರೊಬ್ಬರು ಮೃತಪಟ್ಟ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ.

Advertisement

ಆಸ್ತಿ ವಿಚಾರವಾಗಿ ರೈತನನ್ನು ವಿಜಯಪುರದ ಜಲನಗರ ಠಾಣೆ ಕಾನ್​ಸ್ಟೇಬಲ್ ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ.

ಡಿಸೆಂಬರ್ 5 ರಂದು ಬೆಳಗ್ಗೆ ಹತ್ತೂವರೆ ಸಮಯಕ್ಕೆ ಟಾಟಾ‌ ಸಫಾರಿ ಬೈಕ್ ಮುಖಾಮುಖಿ ಡಿಕ್ಕಿಯಾಗಿ ರೈತ ಮಡ್ಡೆಸಾಬ್ ಗಲಗಲಿ (55) ಮೃತಪಟ್ಟಿದ್ದರು ಎಂದು ವರದಿಯಾಗಿತ್ತು. ಆದರೆ ಇದು ಅಪಘಾತವಲ್ಲ, ಆಸ್ತಿ ವಿಚಾರದಲ್ಲಿ ನಡೆದ ಕೊಲೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಮುಧೋಳ ತಾಲೂಕಿನ ಶಿರೋಳ‌ ಗ್ರಾಮದಲ್ಲಿರುವ ಮೂರೂವರೆ ಎಕರೆ ಜಮೀನು ವಿವಾದ ವಿಚಾರವಾಗಿ ಕಾನ್​ಸ್ಟೇಬಲ್ ಮನ್ಸೂರ್ ಅಲಿ ಟಾಟಾ ಸಫಾರಿ ಕಾರಿನಿಂದ ಬೈಕ್‌ಗೆ  ಡಿಕ್ಕಿ‌ ಹೊಡೆದು ಮಡ್ಡೆಸಾಬ್ ಗಲಗಲಿ ಅವರನ್ನು ಕೊಲೆ ಮಾಡಿದ್ದನು. ಕೃತ್ಯ ಎಸಗಲು ಸಹೋದರ‌ ಮೆಹಮೂದ್ ಕೈಜೋಡಿಸಿದ್ದಾನೆ.

ಸದ್ಯ, ಕೃತ್ಯದ ಸಮಯದಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಿಸಿದ್ದ ಸಾವಳಗಿ ಠಾಣಾ ಪೊಲೀಸರು ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ಮನ್ಸೂರ್ ಹಾಗೂ ಈತನ ಸಹೋದರ ಮೆಹಮೂದ್​ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here