ಬಿಗ್ ಬಾಸ್ ಸೀಸನ್ 12 ಆರಂಭವಾಗಿ ಕೆಲ ದಿನಗಳು ಕಳೆದಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆ ಕುತೂಹಲಕ್ಕೆ ಕಾರಣವಾಗ್ತಿದೆ. ಈಗಾಗಲೇ ಒಬ್ಬರ ಹಿಂದೊಬ್ಬರಂತೆ ಮನೆಯಿಂದ ಹೊರ ಹೋಗ್ತಿದ್ದಾರೆ. ಇದೀಗ ಬಿಗ್ಬಾಸ್ ಸ್ಪರ್ಧಿಗಳಿಗೆ ಬೆಳ್ಳಬೆಳಗ್ಗೆ ಶಾಕ್ ನೀಡಿದೆ.. ಗ್ರ್ಯಾಂಡ್ ಫಿನಾಲೆಗೂ ಮುಂಚೆಯೇ ಒಬ್ಬರ ಆಟ ಇಂದು ಕೊನೆಗೊಳ್ಳಲಿದೆ.
ಗ್ರ್ಯಾಂಡ್ ಫಿನಾಲೆಗೂ ಮುಂಚೆಯೇ ಇಂದು ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಗಾಢ ನಿದ್ರೆಯಲ್ಲಿದ್ದ ಸ್ಪರ್ಧಿಗಳಿಗೆ ಬಿಗ್ ಬಾಸ್ ಬಡಿದೆಬ್ಬಿಸಿದೆ. ಸ್ಪರ್ಧಿಗಳಿಗೆ ತಮಗೆ ಬೇಡವಾದ ಸ್ಪರ್ಧಿಯನ್ನು ಹೊರಕಾಕಲು ನಾಮಿನೇಷನ್ ಮಾಡಲು ಹೇಳಲಾಗಿದೆ. ಈ ಮೂಲಕ ಬಿಗ್ಬಾಸ್ ಇಂದು ಒಬ್ಬ ಸ್ಪರ್ಧಿಗೆ ಗೇಟ್ ಪಾಸ್ ಕೊಡಲು ನಿರ್ಧರಿಸಿದೆ.
ಈ ವಾರ ಮನೆಯಿಂದ ಹೊರಹೋಗಲು ಧ್ರುವಂತ್, ಅಭಿಷೇಕ್, ಅಶ್ವಿನಿ, ಎಸ್.ಎನ್, ಧನುಷ್, ಜಾನ್ವಿ, ಮಂಜು ಭಾಷಿಣಿ, ರಾಶಿಕಾ, ರಕ್ಷಿತಾ, ಗಿಲ್ಲಿ ನಟ, ಸತೀಶ್ ಕಡಬಮ್, ಚಂದ್ರಪ್ರಭ, ಮಲ್ಲಮ್ಮ, ಕಾವ್ಯ ನಾಮಿನೇಟ್ ಆಗಿದ್ದು ಎಲ್ಲರಿಗೂ ನಡುಕ ಶುರುವಾಗಿದೆ. ಇವರಲ್ಲಿ ಇಂದು ಒಬ್ಬರಿಗೆ ಗೇಟ್ಪಾಸ್ ಸಿಗೋದು ಪಕ್ಕಾ ಆಗಿದೆ. ಡೈರೆಕ್ಟ್ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟಿರುವ ಕಾಕ್ರೋಚ್ ಸುಧಿ. ಅಶ್ವಿನಿ ಗೌಡ, ರಾಶಿಕ ಶೆಟ್ಟಿ ಹಾಗು ಮಾಳು ನಿಪನಾಳ ಸೇಫ್ ಆಗಿದ್ದಾರೆ.