ಕಿರುತೆರೆ ನಟಿ ಹಾಗೂ ಬಿಗ್‌ಬಾಸ್ ಸೀಸನ್-11ರ ಸ್ಪರ್ಧಿ ಹಂಸ ಪ್ರತಾಪ್ ಅವರ ಮನೆಯಲ್ಲಿ ಶೋಕ ಮಡುಗಟ್ಟಿದೆ. ಇತ್ತೀಚೆಗೆ ಹಂಸ ಅವರ ತಾಯಿ ನಿಧನರಾಗಿದ್ದು ತಾಯಿ ನಿಧನರಾದ ಸುದ್ದಿಯನ್ನು ಹಂಸ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿದ್ದಾರೆ. ಜೊತೆಗೆ ಅಮ್ಮನೊಂದಿಗೆ ಇದ್ದ ನಂಟು ನೆನೆದು ಭಾವುಕರಾಗಿದ್ದಾರೆ.
ʼಅಮ್ಮ ಮಿಸ್ ಯೂ, ಈಗ ನೀನು ನಮ್ಮ ನೆನಪು ಮಾತ್ರ. ನೀವು ನಮಗಾಗಿ ಮಾಡಿದ ತ್ಯಾಗ ಎಂದಿಗೂ ನೆನಯುವಂತದ್ದು. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಅಮ್ಮಾ..ʼ ಎಂದು ಹಂಸ ಅವರು ತಮ್ಮ ತಾಯಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.
Advertisement
ಹಲವು ಕಿರುತೆರೆ ಧಾರವಾಹಿಗಳಲ್ಲಿ ಪೋಷಕ ನಟಿಯಾಗಿ ಮಿಂಚಿರುವ ಹಂಸ ಸಿನಿಮಾಗಳಲ್ಲೂ ನಟಿಸಿ ಖ್ಯಾತಿ ಘಳಿಸಿದ್ದಾರೆ. ಅಲಕ್ಲದೆ ಬಿಗ್ ಬಾಸ್ ಸೀಸನ್ ೧೧ರ ಸ್ಪರ್ಧಿಯೂ ಆಗಿದ್ದರು.