ಬಿಗ್ ಬಾಸ್ ಕನ್ನಡ ಸೀಸನ್ 12 ಅದ್ಧೂರಿಯಾಗಿ ಆರಂಭವಾಗಿದ್ದು ಸ್ಪರ್ಧಿಗಳು ಖುಷಿ ಖುಷಿಯಾಗಿ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಆದರೆ ಮನೆಗೆ ಕಾಲಿಟ್ಟ ಮೊದಲ ದಿನವೇ ಸ್ಪರ್ಧಿಗಳು ಬಿಗ್ ಬಾಸ್ ಬಿಗ್ ಶಾಕ್ ನೀಡಿದ್ದಾರೆ. ಸ್ಪರ್ಧಿಗಳು ಮನೆಗೆ ಕಾಲಿಟ್ಟು ನಿಟ್ಟುಸಿರು ಬಿಡುವ ಮುನ್ನವೇ ಒಬ್ಬರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸೋಕೆ ರೆಡಿಯಾಗಿದ್ದಾರೆ.
ಬಿಗ್ ಬಾಸ್ ಪ್ರತಿ ಸೀಸನ್‌ನಲ್ಲಿ ಒಂದು ವಾರದ ನಂತರ ಎಲಿಮಿನೇಷನ್ ನಡೆಯುತ್ತಿತ್ತು. ಆದರೆ ಈ ಬಾರಿ ಕಾರ್ಯಕ್ರಮದ ಮೊದಲ ದಿನವೇ ಎಲಿಮಿನೇಷನ್ ಶಾಕ್ ಕೊಟ್ಟಿದೆ. ಸ್ಪರ್ಧಿಗಳು ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಳ್ಳುವ ಮುನ್ನವೇ ಬಿಗ್ ಬಾಸ್ ಒಬ್ಬರನ್ನು ಮನೆಯಿಂದ ಹೊರಗೆ ಕಳಿಸೋಕೆ ರೆಡಿಯಾಗಿದ್ದಾರೆ.
ನಾನು ಬಂದಿರೋ ಉದ್ದೇಶ ಸ್ವಾಗತ ಮಾಡೋಕಲ್ಲ, ನಿಮ್ಮಲ್ಲಿ ಒಬ್ಬರಿಗೆ ವಿದಾಯ ಹೇಳೋದಕ್ಕೆ ಎಂದು ಬಿಗ್‌ಬಾಸ್ ಶಾಕ್ ಕೊಟ್ಟಿದ್ದಾರೆ. ಪರಸ್ಪರ ಚರ್ಚಿಸಿ ಒಬ್ಬರಿಗೆ ಮುಖ್ಯದ್ವಾರ ತೋರಿಸಿ ಎಂದು ಪ್ರೋಮೋದಲ್ಲಿ ಬಿಗ್‌ಬಾಸ್ ಹೇಳಿದ್ದಾರೆ. ಈ ವಿಚಾರವಾಗಿ ಮೊದಲ ದಿನವೇ ಸ್ಪರ್ಧಿಗಳ ನಡುವೆ ಚರ್ಚೆ ನಡೆದಿದೆ. ಯಾರನ್ನು ಮನೆಯಿಂದ ಹೊರಗೆ ಕಳಿಸೋದು ಎಂದು ಹಲವರ ಹೆಸರನ್ನು ಸ್ಪರ್ಧಿಗಳೇ ಹೇಳುತ್ತಿದ್ದಾರೆ. ಈ ಪೈಕಿ ಆ ಮೂವರ ಹೆಸರು ಮುನ್ನೆಲೆಗೆ ಬಂದಿದೆ.
ಮಾಳು, ಸ್ಪಂದನಾ ಹಾಗು ರಕ್ಷಿತಾ ಶೆಟ್ಟಿ ಅವರ ಹೆಸರನ್ನು ಉಳಿದ ಸ್ಪರ್ಧಿಗಳು ನಾಮಿನೇಟ್ ಮಾಡಿದ್ದಾರೆ. ಈ ಮೂವರಲ್ಲಿ ಒಬ್ಬರು ಇಂದೇ ಬಿಗ್‌ಬಾಸ್ ಮನೆಯಿಂದ ಹೊರಬರಲಿದ್ದಾರೆ. ಇಂದು ರಾತ್ರಿ ಪ್ರಸಾರವಾಗುವ ಸಂಚಿಕೆಯಲ್ಲಿ ಎಲಿಮಿನೇಟ್ ಆಗುವ ಸ್ಪರ್ಧಿ ಯಾರೆಂದು ತಿಳಿಯಲಿದೆ.