ಎರಡೇ ವಾರಕ್ಕೆ ಬಂದ್ ಆಯ್ತು ಬಿಗ್ ಬಾಸ್ ಮನೆ! ಜಾಲಿವುಡ್ ಸ್ಟುಡಿಯೋ ಗೆ ಬೀಗ

0
Spread the love

ಪರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ಜಾಲಿವುಡ್‌ ಸ್ಟುಡಿಯೋಸ್‌ಗೆ ಬೀಗ ಬಿದ್ದಿದೆ. ಬಿಗ್‌ ಬಾಸ್‌ ನಡೆಯುತ್ತಿರುವ ಜಾಗಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಹೌದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯಲ್ಲಿ ನಿರ್ಮಿಸಲಾಗಿದ್ದ ಜಾಲಿವುಡ್ ಸ್ಟುಡಿಯೋಸ್‌ನ ಕಟ್ಟಡಕ್ಕೆ ಬೀಗ ಹಾಕಲಾಗಿದೆ.

Advertisement

ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಶೋ ಇದೇ ಸ್ಟುಡಿಯೋದಲ್ಲಿ ನಡೆಯಿತ್ತಿತ್ತು. ಆದರೆ ಇದೀಗ ಸ್ಟುಡಿಯೋವನ್ನು ಸೀಲ್ ಮಾಡಿರೋದ್ರಿಂದ ಬಿಗ್ ಬಾಸ್ ಶೋಗೆ ಬಿಗ್ ಶಾಕ್ ಎದುರಾದಂತಾಗಿದೆ. ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ಮಾಲಿನ್ಯ ನಿಯಂತ್ರಣ ಮಂಡಳಿಯು ಕಳೆದ ವರ್ಷ ಕೊಟ್ಟಿದ್ದ ನೋಟೀಸ್ ಗಳನ್ನು ತೀವ್ರವಾಗಿ ನಿರ್ಲಕ್ಷಿಸಿತ್ತು.

ಹಸಿ ಕಸ, ಒಣ ಕಸವನ್ನು ಬೇರ್ಪಡಿಸುತ್ತಿರಲಿಲ್ಲ. ಜೊತೆಗೆ ನೀರು ಅನ್ನು ಶುದ್ದೀಕರಣ ಮಾಡುತ್ತಿರಲಿಲ್ಲ. ಈ ಬಗ್ಗೆ ಅನೇಕ ಭಾರಿ ನೋಟೀಸ್ ಕೊಟ್ಟರೂ ಜಾಲಿವುಡ್ ಸ್ಟುಡಿಯೋ ಅಂಡ್ ಅಡ್ವೆಂಚರ್ಸ್ ನಿರ್ಲಕ್ಷ್ಯ ತೋರಿತ್ತು.

ಇದರಿಂದಾಗಿ ನಿನ್ನೆ ಮತ್ತೊಮ್ಮೆ ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ಗೆ ಬೀಗ ಜಡಿಯಲು ಮಾಲಿನ್ಯ ನಿಯಂತ್ರಣ ಮಾಡಲು ಆದೇಶ ಹೊರಡಿಸಿತ್ತು . ಆ ಆದೇಶವನ್ನು ಇಂದು ಪೊಲೀಸ್ ಭದ್ರತೆ ಪಡೆದು ರಾಮನಗರ ತಹಸೀಲ್ದಾರ್ , ಕಂದಾಯ  ಇಲಾಖೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.

 


Spread the love

LEAVE A REPLY

Please enter your comment!
Please enter your name here