ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 12ರ ಆರಂಭಕ್ಕೆ ಇನ್ನೂ ಕೆಲ ದಿನಗಳು ಮಾತ್ರವೇ ಭಾಕಿ ಇದೆ. ಮತ್ತೆ ಸುದೀಪ್ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಇದೀಗ ಬಿಗ್ ಬಾಸ್ ತಂಡ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಬಹುದಿನಗಳಿಂದ ಕಾತರದಿಂದ ಕಾಯ್ತಿದ್ದ ಬಿಗ್‌ಬಾಸ್ ಸೀಸನ್ 12ರ ಪ್ರೋಮೋ ರಿಲೀಸ್ ಆಗಿದೆ. ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್‌ನಲ್ಲಿ ಬಿಗ್‌ಬಾಸ್ ಪ್ರೋಮೋ ಶೇರ್ ಮಾಡಲಾಗಿದೆ.
ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಸ್ವಾಗತ ಎನ್ನುತ್ತ ಸುದೀಪ್ ಪ್ರೋಮೋದಲ್ಲಿ ಎಂಟ್ರಿ ನೀಡಿದ್ದಾರೆ. ‘ಹೊಸ ಸೆಟ್ ರೆಡಿ.. ಹೊಸ ಕಂಟೆಸ್ಟೆಂಟ್ ರೆಡಿ, ಏಳು ಕೋಟಿ ಕನ್ನಡಿಗರು ಕೂಡ ರೆಡಿ.. ಸರ್ ನೀವು..? ಎಂದು ಹಿನ್ನೆಲೆ ಧ್ವನಿ ಕೇಳಿಸಿದೆ. ಅದಕ್ಕೆ ‘ನಾನು ರೆಡಿ’ ಎಂದು ಸುದೀಪ್ ಥಮ್ಸ್ಅಪ್ ಮಾಡಿದ್ದಾರೆ.
ಡಿಫರೆಂಟ್ ಸುದೀಪ್ ಹೊಸ ಹೇರ್ ಸ್ಟೈಲ್ನಲ್ಲಿ ಸಖತ್ ಆಗಿ ಕಾಣ್ತಿದ್ದಾರೆ. ಇನ್ನು, ಪ್ರೋಮೋದಲ್ಲಿ ಕರ್ನಾಟಕ, ರಾಜ್ಯಗಳ ಸಾಂಸ್ಕೃತಿಕ ಆಚರಣೆಯ ದೃಶ್ಯ ಇದೆ. ಬಿಗ್ ಬಾಸ್ ಶೋ ನೋಡುತ್ತಾ ಗಾಸಿಪ್ ಮಾಡುವ ಜನ ಸಮೂಹದ ಜೊತೆಗೆ ಸುದೀಪ್ ಧ್ವನಿ ಕೇಳಿಸಿದೆ. ಇನ್ನು ಸೆಪ್ಟೆಂಬರ್ 28ಕ್ಕೆ ಬಿಗ್‌ಬಾಸ್ ಸೀಸನ್ 12 ಅದ್ಧೂರಿಯಾಗಿ ಪ್ರಾರಂಭಗೊಳ್ಳಲಿದೆ.



