ಹಾವೇರಿ: ಹನುಮಂತ ಅವರು ಹುಟ್ಟಿದ್ದು ಹಾವೇರಿಯ ಚಿಲ್ಲೂರಬಡ್ನಿಯಲ್ಲಿ. ಅವರು ಕಪ್ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಊರಿಗೆ ಮರಳಿದ್ದಾರೆ. ಸವಣೂರು ಪಟ್ಟಣಕ್ಕೆ ಬಂದ ಹನುಮಂತುಗೆ ಡಿಜೆ ಹಾಕಿ ಅದ್ಧೂರಿ ಸ್ವಾಗತ ಕೋರಲಾಗಿದೆ.
Advertisement
ಹನುಮಂತು ಬಿಗ್ ಬಾಸ್ ವಿನ್ನರ್ ಕಪ್ ಹಿಡಿದು ಮೆರವಣಿಗೆ ನಡೆಸಿದ್ದಾನೆ. ಸವಣೂರು ಪಟ್ಟಣದಲ್ಲಿ ಬಿಗ್ ಬಾಸ್ ವಿನ್ನರ್ ಹನುಮಂತನ ಅದ್ಧೂರಿ ಮೆರವಣಿಗೆ ಮಾಡಲಾಯಿತು. ತವರೂರಿನ ಜನ ಹನುಮಂತು ಹೋದಲ್ಲೆಲ್ಲಾ ಭರ್ಜರಿ ಸ್ವಾಗತ ಕೋರಿದರು.
ಹನುಮಂತು ಜನರತ್ತ ಕೈ ಬಿಸಿ, ಕೈ ಮುಗಿದು ಧನ್ಯವಾದ ತಿಳಿಸಿದ್ರೆ ಜನರು ಸೆಲ್ಪಿಗೆ ಮುಗಿ ಬಿದ್ದಿದ್ದಾರೆ. ಅದ್ಧೂರಿ ಮೆರವಣಿಗೆಯುದ್ದಕ್ಕೂ ಹನುಮಂತುಗೆ ಸನ್ಮಾನ ಮಾಡಲಾಯಿತು. ಕೇಳಿದವರಿಗೆ ಸೆಲ್ಫಿ ಕೊಟ್ಟ ಹನುಮಂತ, ಹಾಡು ಹೇಳಿ ಅಭಿಮಾನಿಗಳನ್ನು ರಂಜಿಸಿದ. ಪಾತ್ರಧಾರಿ ನಾವೆಲ್ಲ, ಸೂತ್ರಧಾರಿ ಶಿವ ಮೇಲ ಎಂದು ಹಾಡಿ ಹನುಮಂತ ಖುಷಿ ಪಡಿಸಿದ್ದಾನೆ.