ಯಾದಗಿರಿ: ಬೈಕ್-ಕಾರು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ಜೇವರ್ಗಿ ರಸ್ತೆ ಬಳಿ ನಡೆದಿದೆ. ಸುರಪುರ ತಾಲೂಕಿನ ಚಾಮನಾಳ್ ಗ್ರಾಮದ ರಾಜು (31) ಹಾಗೂ ದೇವಿಂದ್ರ (22) ಮೃತ ದುರ್ದೈವಿಗಳಾಗಿದ್ದು,
Advertisement
ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡ್ತಾಯಿದ್ದ ಮೃತರಿಬ್ಬರು, ಕೆಲಸ ಮುಗಿಸಿಕೊಂಡು ಶಹಾಪುರದಿಂದ ಚಾಮನಾಳ್ ಗೆ ಹೋಗ್ತಾಯಿದ್ದಾಗ ಕಲಬುರಗಿ ಕಡೆಯಿಂದ ಬರ್ತಾಯಿದ್ದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ.
ಮುಖಾಮುಖಿ ಡಿಕ್ಕಿಯ ರಭಸಕ್ಕೆ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.