ವಿಜಯಪುರ:- ವಿಜಯಪುರ ನಗರದ ಹೊರಭಾಗದ ಇಂಡಿ ಬೈ ಪಾಸ್ ಬಳಿ ರಸ್ತೆ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾನೆ.
ಮೃತನನ್ನು ಮಾಳು ಗುಂಡಣ್ಣನವರ ಎಂದು ಗುರುತಿಸಲಾಗಿದೆ. ವಿಜಯಪುರ ನಗರದ ಗಡಗಿ ಲೇ ಔಟ್ ನಿವಾಸಿಯಾಗಿದ್ದು, ಮಾಳು ಖಾಸಗಿ ಶಾಲೆಯೊಂದರಲ್ಲಿ ವಾಹನ ಚಾಲಕನಾಗಿದ್ದ ಎನ್ನಲಾಗಿದೆ.
ಸೊಲಾಪುರ ಬೈ ಪಾಸ್ ನಿಂದ ಬರುವಾಗ ಇಂಡಿ ಬೈ ಪಾಸ್ ಬಳಿ ಡಿವೈಡರ್ ಗೆ ಗುದ್ದಿ ಸ್ಥಳದಲ್ಲೇ ಸಾವನಪ್ಪಿದ್ದಾನೆ.
ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.



