ಹುಬ್ಬಳ್ಳಿ: ಕಾರ್ಪೋರೇಷನ್ ಕಸದ ಗಾಡಿಗೆ ಬೈಕ್ ಡಿಕ್ಕಿಯಾಗಿ ಕೋಚಿಂಗ್ ಕ್ಲಾಸ್ ಗೆ ಹೋಗುತ್ತಿದ್ದ ಯುವಕ ಸಾವನ್ನಪ್ಪಿ, ಓರ್ವ ಯುವಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಹಿಂಭಾಗ ನಡೆದಿದೆ.
Advertisement
ಅದ್ವೈತ್(18) ಸ್ಥಳದಲ್ಲೆ ಸಾವನ್ನಪ್ಪಿರುವ ದುರ್ಧೈವಿಯಾಗಿದ್ದಾನೆ. ಹಿಂಬದಿ ಸವಾರ ವಿವೇಕ್ ಗೆ ಗಂಭೀರ ಗಾಯಗೊಂಡ ಯುವಕನಾಗಿದ್ದಾನೆ.
ಇಬ್ಬರು ಕೋಚಿಂಗ್ ಕ್ಲಾಸ್ ಗೆ ತೆರಳುವಾಗ ಹುಧಾ ಮಾಹಾನಗರ ಪಾಲಿಕೆಯ ಕಸದ ಗಾಡಿಗೆ ಬೈಕ್ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಗಾಯಾಳು ವಿವೇಕ್ ಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.