ಮಂಡ್ಯ: ಬೈಕಿಗೆ ಅಡ್ಡ ಬಂದ ಕಾಡು ಹಂದಿಗೆ ಡಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ನಂದಿಪುರ ಗ್ರಾಮದಲ್ಲಿ ನಡೆದಿದೆ.
ಭವ್ಯ (26) ಮೃತ ದುರ್ಧೈವಿಯಾಗಿದ್ದು, ಸಂಬಂಧಿಕರ ಮನೆಯಿಂದ ತಮ್ಮ ಸ್ವಗ್ರಾಮ ನಂದಿಪುರಕ್ಕೆ ಹೋಗುವ ವೇಳೆ ಬೈಕ್ ಗೆ ಕಾಡು ಹಂದಿ ಅಡ್ಡ ಬಂದು ಬೈಕ್ ನಲ್ಲಿದ್ದ ಮೂವರು ಕೆಳಗೆ ಬಿದ್ದು ದುರ್ಘಟನೆ ಸಂಭವಿಸಿದೆ.
ಪತಿ ಸಿದ್ದರಾಜು ಹಾಗೂ ಮಗು ಲಕ್ಷ್ಮಿ ಗೌಡಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮೃತ ಮಹಿಳೆ ಭವ್ಯಗೆ ತಲೆ ಪೆಟ್ಟಾದ ಹಿನ್ನಲೆ ಸಾವನ್ನಪ್ಪಿದ್ದಾರೆ.
ಮಳವಳ್ಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಶವ ರವಾನೆ ಮಾಡಲಾಗುತ್ತದೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



