ಬೈಕ್ ಡಿಕ್ಕಿ: ಎಂಟು ವರ್ಷದ ಬಾಲಕ ಸ್ಥಳದಲ್ಲೇ ದುರ್ಮರಣ!

0
Spread the love

ಬೆಂಗಳೂರು:- ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆಬದಿ ಆಟ ಆಡುತ್ತಿದ್ದ 8 ವರ್ಷದ ಬಾಲಕ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಬೆಂಗಳೂರಿನ ಮಹದೇವಪುರದ ನ್ಯೂ ಟೆಂಪಲ್ ರಸ್ತೆಯಲ್ಲಿ ಜರುಗಿದೆ.

Advertisement

8 ವರ್ಷದ ಪರಶುರಾಮ್ ಮೃತ ಬಾಲಕ. ಈತ ರಸ್ತೆಬದಿಯಲ್ಲಿ ಆಟವಾಡುತ್ತಿದ್ದ ಸಂದರ್ಭ ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಈ ಕುರಿತು ಮಹದೇವಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.


Spread the love

LEAVE A REPLY

Please enter your comment!
Please enter your name here