ವಿಜಯಸಾಕ್ಷಿ ಸುದ್ದಿ, ಗದಗ : ಭಗತಸಿಂಗ್ ಜಯಂತಿಯ ಅಂಗವಾಗಿ ಭಗತಸಿಂಗ್ ಅಭಿಮಾನಿ ಬಳಗದಿಂದ ರಕ್ತದಾನ ಶಿಬಿರ, ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಬೈಕ್ ರ‍್ಯಾಲಿಯು ಭಗತಸಿಂಗ್ ಸರ್ಕಲ್‌ನಿಂದ ಪ್ರಾರಂಭವಾಗಿ ಒಕ್ಕಲಗೇರಿ ಓಣಿಯ ಶ್ರೀ ರಾಚೋಟೇಶ್ವರ ದೇವಸ್ಥಾನ, ಅಂಬಾಭವಾನಿ ದೇವಸ್ಥಾನ, ಚವಡಿ ಕೂಟ, ಹಳೆ ಸರಾಫ ಬಜಾರ, ಮಹಾರಾಣಾ ಪ್ರತಾಪ್ ಸಿಂಹ ವೃತ್ತ, ಟಾಂಗಾಕೂಟ, ಬಸವೇಶ್ವರ ಸರ್ಕಲ್, ತಿಲಕ ಪಾರ್ಕ್ ಮೂಲಕ ಶ್ರೀ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದ ಅವರಣಕ್ಕೆ ಮುಕ್ತಾಯಗೊಂಡಿತು. ನಂತರ ದೇವಸ್ಥಾನದಲ್ಲಿ ರಕ್ತದಾನ ಶಿಬಿರ ಜರುಗಿತು.
ಈ ಸಂದರ್ಭದಲ್ಲಿ ಮಂಜುನಾಥ ಬ.ಮುಳಗುಂದ, ಅಭಿಷೇಕ್, ಮುತ್ತು, ಸುದೀಪ್, ಮಹೇಶ, ಮಂಜು, ಮಾಂತೇಶ, ವಿಜಯ, ಸಾಯಿ, ಕಾರ್ತಿಕ, ಅಮಿತ, ಸುನೀಲ, ಬಸು, ಈಶ್ವರ, ಪ್ರದೀಪ್, ಗಿರೀಶ, ಅವಿನಾಶ್, ಸಿದ್ದು, ಪ್ರಶಾಂತ, ದೀಪು, ದೇವರಾಜ, ಉದಯ, ವಿನಯ, ನವೀನ, ರವಿ, ಉಮೇಶ್, ಮಂಜು, ಅನಿಲ ಸೇರಿದಂತೆ ನೂರಾರು ಯುವಕರು ಭಾಗಿಯಾಗಿದ್ದರು.