ಧಾರವಾಡ: ಹಿಟ್ ಆ್ಯಂಡ್ ರನ್ʼಗೆ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಧಾರವಾಡ ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೈಕ್ಗೆ ಹಿಂದಿನಿಂದ ಬಂದ ಬೊಲೆರೋ ವಾಹನವೊಂದು ಗುದ್ದಿದೆ. ಗುದ್ದಿದ ರಭಸಕ್ಕೆ ಬೈಕ್ನಿಂದ ಹಾರಿ ಪಕ್ಕದ ರಸ್ತೆ ಬಿದ್ದ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಧಾರವಾಡದ ಮದಿಹಾಳ ಬಡಾವಣೆ ನಿವಾಸಿ ರೋಹಿತ್ ಜಗದೀಶ ಕುಂಬಾರ (20), ಮೃತ ದುರ್ದೈವಿ. ಅಪಾಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೇಗವಾಗಿ ಬಂದ ಬೊಲೆರೋ ಹಿಂದಿನಿಂದ ಗುದ್ದಿದೆ. ಡಿಕ್ಕಿ ರಭಸಕ್ಕೆ ರೋಹಿತ್ 10 ಅಡಿ ದೂರ ಹೋಗಿ ಬಿದ್ದಿದ್ದ. ಈ ವೇಳೆ ಹೆಲ್ಮೆಟ್ ಹಾಕಿಕೊಂಡಿದ್ದರೂ ಮೃತಪಟ್ಟಿದ್ದಾನೆ. ಧಾರವಾಡ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.



